ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇಂಡೋನೇಷ್ಯಾದ ರೈಲು ಯೋಜನೆಯಲ್ಲಿ ಆದಾನಿ ಗ್ರೂಪ್ ಹೂಡಿಕೆ (Adani group | Railway project | South Sumatra | Government | Infrastructure)
ದೇಶದ ಉದ್ಯಮ ಕ್ಷೇತ್ರದಲ್ಲಿ ಪ್ರಮುಖ ಸ್ಥಾನಪಡೆದಿರುವ ಆದಾನಿ ಗ್ರೂಪ್, ಇಂಡೋನೇಷ್ಯಾದ ದಕ್ಷಿಣ ಸುಮಾತ್ರಾ ಪ್ರಾಂತ್ಯದ ಕಲ್ಲಿದ್ದಲು ರೈಲ್ವೆ ಯೋಜನೆಯಲ್ಲಿ 1.6 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ನಿರ್ಧರಿಸಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಇಂಡೋನೇಷ್ಯಾದಲ್ಲಿ ಕಲ್ಲಿದ್ದಲು, ತೈಲ ಮತ್ತು ನೈಸರ್ಗಿಕ ಅನಿಲ ಸೇರಿದಂತೆ ಭಾರಿ ಪ್ರಮಾಣದ ನೈಸರ್ಗಿಕ ಸಂಪನ್ಮೂಲಗಳಿದ್ದು, ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಯ ಕೊರತೆಯನ್ನು ಎದುರಿಸುತ್ತಿದೆ.
ದೇಶದಲ್ಲಿ ಕನಿಷ್ಠ 20 ಬಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲು ಸಂಗ್ರಹವಿದೆ. ದಕ್ಷಿಣ ಸುಮಾತ್ರಾ ದ್ವೀಪದಲ್ಲಿ ದೇಶಧ ಅರ್ಧದಷ್ಟು ಸುಮಾರು 11.5 ಬಿಲಿಯನ್ ಟನ್‌ಗಳಷ್ಟು ಕಲ್ಲಿದ್ದಲು ಸಂಗ್ರಹವಿದೆ ಎಂದು ಇಂಧನ ಮತ್ತು ಗಣಿಗಾರಿಕೆ ಸಚಿವಾಲಯದ ಮೂಲಗಳು ತಿಳಿಸಿವೆ.
ಆದರೆ, 2009ರ ಅವಧಿಯಲ್ಲಿ ಕಳಪೆ ಸಾಗಾಣಿಕೆ ವ್ಯವಸ್ಥೆಯಿಂದಾಗಿ, ಸುಮಾತ್ರಾ ಪ್ರಾಂತ್ಯದಲ್ಲಿ 11.5 ಮಿಲಿಯನ್ ಟನ್‌ಗಳಷ್ಟು ಮಾತ್ರ ಕಲ್ಲಿದ್ದಲು ಉತ್ಪಾದನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.