ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ : ಪ್ರತಿ 10ಗ್ರಾಂಗೆ 18,915 ರೂಪಾಯಿ (Silver | Gold | Bullion)
Bookmark and Share Feedback Print
 
ಜಾಗತಿಕ ಮಾರುಕಟ್ಟೆಗಳ ಚೇತರಿಕೆಯಿಂದಾಗಿ ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದ್ದು,ಪ್ರತಿ 10 ಗ್ರಾಂ ಚಿನ್ನದ ದರದಲ್ಲಿ 225 ರೂಪಾಯಿಗಳಷ್ಟು ಏರಿಕೆಯಾಗಿ 18,915 ರೂಪಾಯಿಗಳಿಗೆ ತಲುಪಿದೆ.

ಕೈಗಾರಿಕೋದ್ಯಮ ಕ್ಷೇತ್ರದ ಬೇಡಿಕೆ ಹೆಚ್ಚಳದಿಂದಾಗಿ ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕಿ.ಗ್ರಾಂಗೆ 770 ರೂಪಾಯಿಗಳಿಗೆ ಏರಿಕೆಯಾಗಿ 30,000 ರೂಪಾಯಿಗಳಿಗೆ ತಲುಪಿದೆ.

ಸ್ಟ್ಯಾಂಡರ್ಡ್ ಚಿನ್ನದ ದರ ಪ್ರತಿ 10ಗ್ರಾಂಗೆ 225 ರೂಪಾಯಿಗಳಷ್ಟು ಏರಿಕೆಯಾಗಿದ್ದು, ವಹಿವಾಟಿನ ಮುಕ್ತಾಯಕ್ಕೆ 18,915 ರೂಪಾಯಿಗಳಿಗೆ ಏರಿಕೆ ಕಂಡಿತು.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 4.90 ಡಾಲರ್‌ಗಳ ಏರಿಕೆಯಾಗಿ, 1,233.40 ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಿದೇಶಿ ಮಾರುಕಟ್ಟೆಗಳಲ್ಲಿ ಬೆಳ್ಳಿಯ ದರ ಪ್ರತಿ ಔನ್ಸ್‌ಗೆ 39 ಸೆಂಟ್‌ಗಳ ಏರಿಕೆಯಾಗಿ, 18.37 ಡಾಲರ್‌ಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬೆಳ್ಳಿ, ಚಿನ್ನ, ಚಿನಿವಾರಪೇಟೆ