ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳದಿಂದಾಗಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 14 ಪೈಸೆ ಏರಿಕೆಯಾಗಿ 46.76 ರೂಪಾಯಿಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಅಲ್ಪ ಕುಸಿತ ಕಂಡು 46.90/91 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 14 ಪೈಸೆ ಏರಿಕೆಯಾಗಿ 46.76 ರೂಪಾಯಿಗಳಿಗೆ ತಲುಪಿದೆ.
ಏಷ್ಯಾದ ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯದ ಕುಸಿತದಿಂದಾಗಿ, ರೂಪಾಯಿ ಮೌಲ್ಯದ ಚೇತರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ,ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಿರುವುದು ಕೂಡಾ ರೂಪಾಯಿ ಮೌಲ್ಯದ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 68.58ಪಾಯಿಂಟ್‌ಗಳ ಏರಿಕೆ ಕಂಡು 18,248.22 ಅಂಕಗಳಿಗೆ ತಲುಪಿದೆ.