ತರಕಾರಿಗಳಾದ ಆಲೂಗಡ್ಡೆ ಮತ್ತು ಈರುಳ್ಳಿ ದರಗಳಲ್ಲಿ ಇಳಿಕೆಯಾಗಿದ್ದರಿಂದ, ವಾರ್ಷಿಕ ಆಹಾರ ಹಣದುಬ್ಬರ ದರ ಅಗಸ್ಟ್ 14ಕ್ಕೆ ವಾರಂತ್ಯಗೊಂಡಂತೆ ಶೇ.10.05ಕ್ಕೆ ಇಳಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಆಹಾರ ಹಣದುಬ್ಬರ ದರ ಅಗಸ್ಟ್ 7ಕ್ಕೆ ವಾರಂತ್ಯಗೊಂಡಂತೆ, ಶೇ.11.40 ರಿಂದ ಶೇ.10.35ಕ್ಕೆ ಇಳಿಕೆಗೊಂಡಿತ್ತು.
ವಾರ್ಷಿಕ ಆಧಾರದನ್ವಯ ಆಲೂಗಡ್ಡೆ ದರದಲ್ಲಿ ಶೇ.50ರಷ್ಟು ಇಳಿಕೆಯಾಗಿದೆ. ಏತನ್ಮಧ್ಯೆ ತರಕಾರಿಗಳ ಒಟ್ಟಾರೆ ದರದಲ್ಲಿ ಶೇ.14.23ರಷ್ಟು ಇಳಿಕೆಯಾಗಿದ್ದು, ಈರುಳ್ಳಿ ದರದಲ್ಲಿ ಶೇ.7.29ರಷ್ಟು ಕುಸಿತವಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ದ್ವಿದಳ ಧಾನ್ಯ, ಭತ್ತ ಮತ್ತು ಗೋಧಿ ದರಗಳಲ್ಲಿ ಶೇ.7.10ರಷ್ಟು ಏರಿಕೆಯಾಗಿದೆ.
ಇತರ ಆಹಾರ ವಸ್ತುಗಳಾದ ಹಾಲು ದರದಲ್ಲಿ ಶೇ.18.22ರಷ್ಟು ಏರಿಕೆಯಾಗಿದ್ದು,ಹಣ್ಣು ದರಗಳಲ್ಲಿ ಶೇ.15.24ರಷ್ಟು ಏರಿಕೆ ಕಂಡಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಉತ್ಪಾದನಾ ಕ್ಷೇತ್ರದ ವಸ್ತುಗಳ ದರಗಳಲ್ಲಿ ಇಳಿಕೆಯಾಗಿದ್ದರಿಂದ, ಸುಮಾರು ಐದು ತಿಂಗಳ ನಂತರ ಒಟ್ಟಾರೆ ಹಣದುಬ್ಬರ ದರ ಶೇ.9.97ಕ್ಕೆ ಇಳಿಕೆಯಾಗಿದೆ.