ಬೆಳ್ಳಿ ದರ ದಾಖಲೆಯ ಏರಿಕೆ : ಪ್ರತಿ ಕೆಜಿಗೆ 30,625 ರೂಪಾಯಿ
ಮುಂಬೈ, ಗುರುವಾರ, 26 ಆಗಸ್ಟ್ 2010( 16:20 IST )
ಕೈಗಾರಿಕೋದ್ಯಮ ಕ್ಷೇತ್ರದ ಬೇಡಿಕೆ ಹಾಗೂ ಸಂಗ್ರಹಕಾರರಿಂದ ಬೆಳ್ಳಿಯ ಖರೀದಿಯ ಭರಾಟೆಯಿಂದಾಗಿ, ಪ್ರತಿ ಕೆಜಿ ಬೆಳ್ಳಿಯ ದರದಲ್ಲಿ 365 ರೂಪಾಯಿಗಳಿಗೆ ಏರಿಕೆಯಾಗಿ ದಾಖಲೆಯ 30,625 ರೂಪಾಯಿಗಳಿಗೆ ತಲುಪಿದೆ.
ಬೆಳ್ಳಿಯನ್ನು ಬಹುತೇಕ, ಎಲೆಕ್ಟ್ರಾನಿಕ್ ಮತ್ತು ಫೋಟೋ ಇಂಡಸ್ಟ್ರಿಯಲ್ಲಿ ಬಳಸಲಾಗುತ್ತದೆ.
ಸ್ಟ್ಯಾಂಡರ್ಡ್ ಚಿನ್ನದ ದರದಲ್ಲಿ ಕೂಡಾ ಪ್ರತಿ 10ಗ್ರಾಂಗೆ 25 ರೂಪಾಯಿಗಳ ಏರಿಕೆ ಕಂಡು 18,940 ರೂಪಾಯಿಗಳಿಗೆ ತಲುಪಿದೆ.
ಜಾಗತಿಕ ಮಾರುಕಟ್ಟೆಗಳ ಆರ್ಥಿಕ ಕುಸಿತ ಭೀತಿಯಿಂದಾಗಿ, ಹೂಡಿಕೆದಾರರು ಸುರಕ್ಷಿತ ಠೇವಣಿಯಾದ ಚಿನ್ನದ ಖರೀದಿಯಲ್ಲಿ ತೊಡಗಿದ್ದರಿಂದ ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ನೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 7.90 ಡಾಲರ್‌ಗಳ ಏರಿಕೆಯಾಗಿ 1,241.30 ಡಾಲರ್‌ಗಳಿಗೆ ತಲುಪಿದೆ.
ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಬೆಳ್ಳಿಯ ದರ, 65ಸೆಂಟ್‌ಗಳ ಏರಿಕೆಯಾಗಿ 19.03 ಡಾಲರ್‌ಗಳಿಗೆ ಏರಿಕೆಯಾಗಿದೆ.