ದೇಶದ ಬೃಹತ್ ಕಾರು ರಫ್ತು ತಯಾರಿಕೆ ಸಂಸ್ಥೆಯಾದ ಹುಂಡೈ ಮೋಟಾರ್ ಇಂಡಿಯಾ ಇಂಡಿಯಾ, ಎಲ್ಲಾ ಮಾಡೆಲ್‌ಗಳ ಕಾರುಗಳ ದರಗಳಲ್ಲಿ ಶೇ.1.2ರಷ್ಟು ಏರಿಕೆ ಘೋಷಿಸಿದ್ದು, ಸೆಪ್ಟೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಾರು ತಯಾರಿಕೆ ಕಚ್ಚಾ ವಸ್ತುಗಳ ದರಗಳಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ, ದರಗಳನ್ನು ಏರಿಕೆ ಮಾಡಲಾಗಿದೆ ಎಂದು ಹುಂಡೈ ಮೋಟಾರ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್‌ನ (ಮಾರುಕಟ್ಟೆ ಮತ್ತು ಮಾರಾಟ)ವಿಭಾಗದ ನಿರ್ದೇಶಕ ಅರವಿಂದ್ ಸೆಕ್ಸೆನಾ ಮಾತನಾಡಿ, ಕಾರು ತಯಾರಿಕೆ ವೆಚ್ಚದಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವುದರಿಂದ, ದರ ಏರಿಕೆಯ ಪ್ರಯತ್ನವನ್ನು ಮಾಡಲಾಯಿತು. ಆದರೆ ಇದೀಗ ಅಲ್ಪ ಹೊರೆಯನ್ನು ಗ್ರಾಹಕರಿಗೆ ಹೊರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.