ಚಳಿಗಾಲ ಬರುವ ಮುನ್ನವೆ ನಿಮ್ಮ ಕಾರಿಗೆ ಅಗತ್ಯವಾದ ಸಿದ್ಧತೆಗಳನ್ನು ಮಾಡಿಕೊಳ್ಳಲು ಮರೆಯಬೇಡಿ. ಕಾರನ್ನು ಹೊಂದಿರುವ ಗ್ರಾಹಕರು ದೇಶದ ಶೇ.70ರಷ್ಟು ಜನತೆ ಯಾವುದೇ ಸಿದ್ಧತೆಯನ್ನು ಮಾಡಿಕೊಳ್ಳದೆ ನಂತರ ತೊಂದರೆಯನ್ನು ಎದುರಿಸುತ್ತಾರೆ.
ಚಳಿಗಾಲ ಬಂದಾಗ ನಿಮ್ಮ ಕಾರಿನ ಬ್ಯಾಟರಿ, ಇಂಜಿನ್ ಆಯಿಲ್ ,ಟೈರ್ಸ್, ವಿಂಡ್‌ಶಿಲ್ಡ್ ಮತ್ತು ವೈಪರ್‌ಗಳನ್ನು ಸರಿಯಾಗಿ ಪರೀಕ್ಷಿಸಿ, ಅಗತ್ಯವಾದಲ್ಲಿ ಬದಲಿಸುವುದು ಸೂಕ್ತ.
ನಿಮ್ಮ ಕಾರಿನಲ್ಲಿರುವ ಕಾರ್ಪೆಟ್‌ಗಳ ಒಳ ಮತ್ತು ಹೊರಭಾಗಗಳನ್ನು ಸ್ವಚ್ಚವಾಗಿ ತೊಳೆಯುವುದು ಸೂಕ್ತ.
ಕಾರಿನ ಸೈಡ್ ಮಿರರ್‌ಗಳನ್ನು ನಿರ್ಧಿಷ್ಠ ದಿಕ್ಕಿನಲ್ಲಿದೆ ಎನ್ನುವದನ್ನು ಪರಿಕ್ಷೀಸಿ.
ಚಳಿಗಾಲದಲ್ಲಿ ಬ್ಯಾಟರಿಗಳು ಸೂಕ್ತ ಸ್ಥಿತಿಯಲ್ಲಿವೆಯೇ ಎನ್ನುವುದನ್ನು ಗಮನಿಸಿ ಇಲ್ಲವಾದಲ್ಲಿ ಕೂಡಲೇ ಅವುಗಳನ್ನು ಬದಲಿಸಿ.
ಚಳಿಗಾಲಕ್ಕೆ ಮುನ್ನ ಆಯಿಲ್ ಆಂಟಿಫ್ರಿಜ್, ಬ್ರೆಕ್ ಮತ್ತು ಟ್ರಾನ್ಸ್‌ಮಿಷನ್‌ಗಳನ್ನು ಪರೀಕ್ಷಿಸುವುದು ಅಗತ್ಯ.
ಕಾರಿನ ಮುಂಭಾಗದ ವಿಂಡ್‌ಶಿಲ್ಡ್ ಮತ್ತು ವೈಪರ್‌ಗಳ ಬಗ್ಗೆ ಅಸಡ್ಡೆ ಸಲ್ಲದು.
ಗರಿಷ್ಠ ದೂರ ಕಾಣಿಸುವಂತೆ ನಿಮ್ಮ ಕಾರಿನ ಸೈಡ್ ಮಿರರ್ ಸರಿಪಡಿಸಿಕೊಳ್ಳಿ.ಒಂದು ವೇಳೆ ತೊಂದರೆಯಿದ್ದಲ್ಲಿ ಅದನ್ನು ಚಳಿಗಾಲಕ್ಕೆ ಮುನ್ನ ಬದಲಿಸುವುದು ಸೂಕ್ತ.