ಜರ್ಮನಿಯ ವಾಹನೋದ್ಯಮ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವೊಕ್ಸ್‌ವಾಗೆನ್, ಭಾರತದಲ್ಲಿ ಕಳೆದ ಜನೆವರಿ-ಜುಲೈವರೆಗಿನ ಅವಧಿಯ ಮಾರಾಟದಲ್ಲಿ ದ್ವಿಗುಣವಾಗಿ 21,333 ವಾಹನಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ
2010ರ ಕಳೆದ ಜನೆವರಿಯಿಂದ ಜುಲೈವರೆಗಿನ ಅವಧಿಯಲ್ಲಿ ಕಂಪೆನಿಯ ಮೂರು ಪ್ರಮುಖ ಬ್ರ್ಯಾಂಡ್‌ಗಳಾದ ಆಡಿ, ಸ್ಕೊಡಾ ಮತ್ತು ವೊಕ್ಸ್‌ವಾಗೆನ್ ಮಾಡೆಲ್‌ಗಳ 21,333 ಕಾರುಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಜನೆವರಿ-ಜುಲೈ ತಿಂಗಳ ಅವಧಿಯಲ್ಲಿ 9,664 ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದು ವೊಕ್ಸ್‌ವಾಗೆನ್ ಗ್ರೂಪ್ ಇಂಡಿಯಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಏತನ್ಮಧ್ಯೆ, ಕಳೆದ ಏಳು ತಿಂಗಳುಗಳ ಅವಧಿಯಲ್ಲ ಆಡಿ ಮಾಡೆಲ್‌ನ 1,626 ಕಾರುಗಳನ್ನು ಮಾರಾಟ ಮಾಡಲಾಗಿದೆ, ಸ್ಕೊಡಾ ಮಾಡೆಲ್‌ನ 11,120 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
ವೊಕ್ಸ್‌ವಾಗೆನ್‌ನ ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಕೂಡಾ ಕಳೆದ ಏಳು ತಿಂಗಳುಗಳಲ್ಲಿ ಏರಿಕೆಯಾಗಿ, 8,587 ವಾಹನಗಳನ್ನು ಮಾರಾಟ ಮಾಡಲಾಗಿದೆ.
ಭಾರತದ ಕಾರುಗಳ ಮಾರುಕಟ್ಟೆಯಲ್ಲಿ ಚೇತರಿಕೆ ಕಂಡಿದ್ದು, ಇದರಿಂದ ಸೂಕ್ತ ಮಾರುಕಟ್ಟೆಯಲ್ಲಿ ಸೂಕ್ತ ಉತ್ಪನ್ನಗಳೊಂದಿಗೆ ಸೂಕ್ತ ಸಮಯದಲ್ಲಿ ಪಾಲ್ಗೊಂಡಿದ್ದೇವೆ ಎಂದು ವ್ಯವಸ್ಥಾಪಕ ನಿರ್ದೇಶಕ ಜೊರ್ಗ್ ಮುಲ್ಲೆರ್ ಹೇಳಿದ್ದಾರೆ.