ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝಕಿ ಇಂಡಿಯಾ, ಕಾರು ಬೇಡಿಕೆಯ ಹೆಚ್ಚಳವಾಗಿದ್ದರಿಂದ ವಿಸ್ತರಣಾ ಅಂಗವಾಗಿ ಮನೇಸರ್ ಸ್ಥಳದಲ್ಲಿ ಘಟಕವನ್ನು ಸ್ಥಾಪಿಸುವ ಸಾಧ್ಯತೆಗಳಿವೆ ಎಂದು ಹೇಳಿಕೆ ನೀಡಿದೆ.
ಕಂಪೆನಿ ಪ್ರಸ್ತುತ ವಾರ್ಷಿಕವಾಗಿ 1.2 ಮಿಲಿಯನ್ ಕಾರುಗಳನ್ನು ತಯಾರಿಸುತ್ತದೆ. ಮನೇಸರ್‌ನಲ್ಲಿ ಘಟಕವನ್ನು ಸ್ಥಾಪಿಸಲು 1700 ಕೋಟಿ ರೂಪಾಯಿಗಳ ಹೂಡಿಕೆ ಮಾಡಲಿದ್ದು, 250,000 ವಾಹನಗಳನ್ನು ತಯಾರಿಸಬಹುದಾಗಿದೆ ಎಂದು ಕಂಪೆನಿಯ ಮುಖ್ಯಸ್ಥ ಆರ್.ಸಿ.ಭಾರ್ಗವಾ ತಿಳಿಸಿದ್ದಾರೆ.
ಪ್ರಸ್ತುತ 250,000 ಕಾರುಗಳ ಉತ್ಪಾದನೆಗಾಗಿ ಮನೇಸರ್‌ನಲ್ಲಿ ಘಟಕವನ್ನು ಆರಂಭಿಸಲು ಯೋಜನೆಯನ್ನು ರೂಪಿಸಲಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಗಾಗಿ ಯೋಜನೆಗಳು ನಿರಂತರವಾಗಿ ಬದಲಾಗುತ್ತಾ ಇರುತ್ತವೆ. ಅಗತ್ಯವಾದಲ್ಲಿ ಯೋಜನೆಗಳನ್ನು ಚಾಲನೆಗೆ ತರಲಾಗುವುದು ಎಂದು ಹೇಳಿದ್ದಾರೆ.
ಏತನ್ಮದ್ಯೆ, ಮನೇಸರ್‌ನಲ್ಲಿ ಘಟಕವನ್ನು ಸ್ಥಾಪಿಸುವ ನಿರ್ಧಾರ ಕಂಪೆನಿಯ ಅಡಳಿತ ಮಂಡಳಿ ಘೋಷಿಸಬೇಕಾಗುತ್ತದೆ. ಆದರೆ, ಯಾವಾಗ ಪ್ರಾರಂಭಿಸಲಾಗುತ್ತದೆ ಎನ್ನುವ ಕುರಿತು ವಿವರಣೆ ನೀಡಲು ಮುಖ್ಯಸ್ಥ ಭಾರ್ಗವಾ ನಿರಾಕರಿಸಿದ್ದಾರೆ.