ದೇಶದ ವಿಮಾ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಲೈಫ್ ಇನ್‌ಶ್ಯೂರೆನ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(ಎಲ್‌ಐಸಿ)ವೈಯಕ್ತಿಕ ಪಾಲಿಸಿಗಳಲ್ಲಿ ಒಂದು ಕೋಟಿ ಗುರಿಯನ್ನು ದಾಟಿದೆ ಎಂದು ಮೂಲಗಳು ತಿಳಿಸಿವೆ.
ಎಲ್‌ಐಸಿಯ ಪಶ್ಚಿಮ ವಲಯದಲ್ಲಿ 15.86 ಲಕ್ಷ ಪಾಲಿಸಿ,ದಕ್ಷಿಣ ಕೇಂದ್ರ ವಲಯದಲ್ಲಿ 15.46 ಲಕ್ಷ ಪಾಲಿಸಿಗಳು ಉತ್ತರ ವಲಯದಲ್ಲಿ 15.04 ಪಾಲಿಸಿಗಳು, ಉತ್ತರ ಕೇಂದ್ರ ವಲಯದಲ್ಲಿ 13.54, ದಕ್ಷಿಣ ವಲಯದಲ್ಲಿ 12.78 ಲಕ್ಷ ಪಾಲಿಸಿಗಳು ಹಾಗೂ ಪೂರ್ವ ವಲಯದಲ್ಲಿ 12.29 ಲಕ್ಷ ಪಾಲಿಸಿಗಳನ್ನು ಹೊಂದಲಾಗಿದೆ ಎಂದು ಎಲ್‌ಐಸಿ ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ಆರ್ಥಿಕ ವರ್ಷದ ಅವಧಿಯಲ್ಲಿ ಎಲ್‌ಐಸಿ ಸಂಸ್ಥೆ 3.88 ಕೋಟಿ ರೂಪಾಯಿಗಳ ವೈಯಕ್ತಿಕ ಪಾಲಿಸಿಗಳನ್ನು ಪೂರ್ಣಗೊಳಿಸಿ, ಶೇರುಮಾರುಕಟ್ಟೆಯಲ್ಲಿ ಶೇ.73.02ರಷ್ಟು ದಾಖಲೆ ಸ್ಥಾಪಿಸಿತ್ತು.
ಎಲ್‌ಐಸಿ ಸಂಸ್ಥೆ ಪ್ರಸ್ತುತ 27 ಕೋಟಿ ಪಾಲಿಸಿಗಳನ್ನು ಹೊಂದಿದ್ದು, ವಿಮಾ ಕ್ಷೇತ್ರದಲ್ಲಿ ಶೇ.90ರಷ್ಟು ಪಾಲನ್ನು ಹೊಂದಿದೆ. ಉನ್ನತ ಗುಣಮಟ್ಟದ ಗ್ರಾಹಕ ಸೇವೆ ಹಾಗೂ ಸಂಸ್ಥೆಯ ಮೇಲಿರುವ ಗ್ರಾಹರ ವಿಶ್ವಾಸದಿಂದಾಗಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲಾಗಿದೆ ಎಂದು ಸಂಸ್ಥೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.