ಜಾಗತಿಕ ಮಾರುಕಟ್ಟೆಗಳ ಅಸ್ಥಿರತೆಯಿಂದಾಗಿ ಚಿನ್ನದ ಸಂಗ್ರಹಕಾರರಿಂದ ಚಿನ್ನದ ಮಾರಾಟದಲ್ಲಿ ಹೆಚ್ಚಳವಾಗಿದ್ದರಿಂದ, ಚಿನ್ನದ ದರ ಪ್ರತಿ10ಗ್ರಾಂಗೆ 60 ರೂಪಾಯಿಗಳ ಏರಿಕೆಯಾಗಿ 19,140 ರೂಪಾಯಿಗಳಿಗೆ ತಲುಪಿದೆ.
ಕೈಗಾರಿಕೋದ್ಯಮ ಕ್ಷೇತ್ರ ಹಾಗೂ ನಾಣ್ಯಗಳ ತಯಾರಕರಿಂದ ಬೇಡಿಕೆಯಲ್ಲಿ ಕುಸಿತವಾಗಿದ್ದರಿಂದ, ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 250 ರೂಪಾಯಿಗಳ ಇಳಿಕೆಯಾಗಿ 30,400 ರೂಪಾಯಿಗಳಿಗೆ ತಲುಪಿದೆ.
ಏಷ್ಯಾ ಮಾರುಕಟ್ಟೆಯಲ್ಲಿ ಚಿನ್ನದ ಖರೀದಿಯಲ್ಲಿ ಕುಸಿತವಾಗಿದ್ದರಿಂದ, ದೇಶದ ಚಿನಿವಾರಪೇಟೆಯ ಮೇಲೆ ಋಣಾತ್ಮಕ ಪ್ರಭಾವ ಬೀರಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ ಶೇ.0.3ರಷ್ಟು ಇಳಿಕೆಯಾಗಿ 1,233.38 ಡಾಲರ್‌ಗಳಿಗೆ ತಲುಪಿದೆ. ಚಿನ್ನದ ದರ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಎಂಟು ವಾರಗಳ ಗರಿಷ್ಠ 1,244.30 ಡಾಲರ್‌ಗಳಿಗೆ ತಲುಪಿತ್ತು.