ಜಮ್ಮು ಆಂಡ್ ಕಾಶ್ಮಿರ್ ಬ್ಯಾಂಕ್‌ನ ಅಧ್ಯಕ್ಷ ಹಸೀಬ್ ದ್ರಾಬು ತಮ್ಮ ಹುದ್ದೆಗೆ ರಾಜೀನಾಮೆಯನ್ನು ಸಲ್ಲಿಸಿದ್ದು, ಅಡಲಿತ ಮಂಡಳಿ ತಕ್ಷಣ ರಾಜೀನಾಮೆ ಸ್ವೀಕರಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಹೌದು, ಅಡಳಿತ ಮಂಡಳಿಯ ನಿರ್ದೆಶಕರಿಗೆ ರಾಜೀನಾಮೆಯನ್ನು ಸಲ್ಲಿಸಿದ್ದು, ತಕ್ಷಣವೆ ನನ್ನ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಎರಡು ಪ್ರಸ್ತಾವನೆಗಳನ್ನು ಸಲ್ಲಿಸಿದ್ದೇನೆ ಎಂದು ದ್ರಾಬು ಸುದ್ದಿಗಾರರಿಗೆ ತಿಳಿಸಿದ್ದಾರೆ.
2005ರಲ್ಲಿ ಜಮ್ಮು ಆಂಡ್ ಕಾಶ್ಮಿರ ಬ್ಯಾಂಕ್‌ನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದ ದ್ರಾಬು, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರ ಆದೇಶದ ಮೇರೆಗೆ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರಕಾರ ಸಂಚಾಲಿತ ಬ್ಯಾಂಕ್‌ಗೆ 13 ಮಂದಿ ನಿರ್ದೇಶಕರಿದ್ದು, ದ್ರಾಬು ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ.ಬ್ಯಾಂಕ್ ಸುಗಮಾಗಿ ಕಾರ್ಯನಿರ್ವಹಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ವಿತ್ತಕಾರ್ಯದರ್ಶಿಯನ್ನು ಮಧ್ಯಂತರ ಮುಖ್ಯಸ್ಥರನ್ನಾಗಿ ನೇಮಕ ಮಾಡುವಂತೆ ಮನವಿ ಮಾಡಿದೆ.