ಜಮ್ಶೆಡ್ಪುರ್, ಶುಕ್ರವಾರ, 27 ಆಗಸ್ಟ್ 2010( 19:05 IST )
ಟಾಟಾ ಸ್ಟೀಲ್ ಕಂಪೆನಿ ಫುಟ್ಬಾಲ್ ಅಕಾಡೆಮಿಯಂತೆ, ಹಾಕಿ ಅಕಾಡೆಮಿಯನ್ನು ಸ್ಥಾಪಿಸಲು ಯೋಜನೆಯನ್ನು ರೂಪಿಸಿದೆ ಎಂದು ಕಂಪೆನಿಯ ವ್ಯವಸ್ತಾಪಕ ನಿರ್ದೇಶಕ ಎಚ್.ಎಂ. ನೆರೂರ್ಕರ್ ಹೇಳಿದ್ದಾರೆ.
ಟಾಟಾ ಸ್ಟೀಲ್ ಕಂಪೆನಿ ದೇಶದಲ್ಲಿ ಕ್ರೀಡೆ ಉತ್ತೇಜನ ನೀಡುತ್ತಾ ಬಂದಿದೆ. ಆದರೆ ಸರಕಾರಿ ಸ್ವಾಮ್ಯದ ಕಂಪೆನಿಗಳಂತೆ ಪ್ರತಿಭಾವಂತ ಪದಕ ವಿಜೇತ ಕ್ರೀಡಾಪಟುಗಳಿಗೆ ಉದ್ಯೋಗ ನೀಡುವಲ್ಲಿ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಟಾಟಾ ಸ್ಟೀಲ್ ಸಂಸ್ಥಾಪಕ ಸರ್ ದೊರ್ಬಾಜಿ ಟಾಟಾ ಅವರ 151ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ನೆರೂರ್ಕರ್ ಮಾತನಾಡುತ್ತಿದ್ದರು.
ದೇಶಕ್ಕಾಗಿ ಪದಕಗಳನ್ನು ಗೆದ್ದ ಕ್ರೀಡಾಪಟುಗಳಿಗೆ ಟಾಟಾ ಸ್ಟೀಲ್ ಕಂಪೆನಿಯಿಂದ ಪ್ರೋತ್ಸಾಹ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ಪ್ರತಿಷ್ಠಿತ ಹಾಕಿ ಅಕಾಡೆಮಿಯನ್ನು ಸ್ಥಾಪಿಸಲು ಯೋಜನೆಗಳನ್ನು ರೂಪಿಸಲಾಗಿದ್ದು, ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲಾಗುವುದು ಎಂದು ನೆರೂರ್ಕರ್ ತಿಳಿಸಿದ್ದಾರೆ.