ವಿಂಡ್‌ಸ್ಟಾರ್ ಮಿನಿ ವಾಹನದ ಮುಂದಿನ ಚಕ್ರಗಳ ನಡುವಿನ ಸಲಾಕೆ ತುಕ್ಕು ಹಿಡಿದು ಬಿರುಕುಗೊಳ್ಳುವ ಕಳವಳದ ಹಿನ್ನೆಲೆಯಲ್ಲಿ ಫೋರ್ಡ್ ಮೋಟಾರ್ ಕಂಪೆನಿ, 1998-2003ರಲ್ಲಿ ಮಾರಾಟವಾದ ಮಿನಿವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕೆಲ ವರ್ಷಗಳ ನಂತರ ಮಿನಿ ವಾಹನದ ಚಕ್ರದ ನಡುವಿನ ಸಲಾಕೆ ತುಕ್ಕುಹಿಡಿದು ದುರ್ಬಲವಾಗುವ ಸಾಧ್ಯತೆಗಳಿವೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ ಮಾರಾಟ ಮಾಡಲಾದ ಮಿನಿ ವಾಹನಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಕಂಪೆನಿ ನಿರ್ಧರಿಸಿದೆ ಎಂದು ಝಿನುವಾ ಪತ್ರಿಕೆ ವರದಿ ಮಾಡಿದೆ.
ಕೆನಡಾದಲ್ಲಿ ಮಾರಾಟ ಮಾಡಲಾದ 113,000 ವಿಂಡ್‌ಸ್ಟಾರ್ ವಾಹನಗಳ ವಾಪಸಾತಿಗೆ ಕರೆನೀಡಲಾಗಿದೆ ಎಂದು ಫೋರ್ಡ್ ವಕ್ತಾರರು ತಿಳಿಸಿದ್ದಾರೆ.
ಮಿನಿ ವಾಹನ ಮುಂಭಾಗದ ಚಕ್ರದ ನಡುವಿನ ಸಲಾಕೆಯನ್ನು ಪರೀಕ್ಷಿಸಿ,ಹೊಸತೊಂದನ್ನು ಅಳವಡಿಸಲು ಫೋರ್ಡ್ ಡೀಲರ್‌ಗಳಿಗೆ ಆದೇಶಿಸಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
1992-2003ರಲ್ಲಿ ಮಾರಾಟವಾದ ವಿಂಡ್‌ಸ್ಟಾರ್ ಮಿನಿ ವಾಹನಗಳ ಮುಂಭಾಗದ ಚಕ್ರದ ನಡುವಿನ ಸಲಾಕೆ ವೈಫಲ್ಯತೆಯಿಂದಾಗಿ ಗ್ರಾಹಕರಿಂದ ಸುಮಾರು 200 ದೂರುಗಳು ದಾಖಲಾದ ಹಿನ್ನೆಲೆಯಲ್ಲಿ, ಯುಎಸ್ ನ್ಯಾಷನಲ್ ಹೈವೇಟ್ರಾಫಿಕ್ ಸೇಫ್ಟಿ ಅಡ್‌ಮಿನಿಸ್ಟ್ರೇಶನ್ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿತ್ತು.