ಕಾಡಿ (ಗುಜರಾತ್), ಶನಿವಾರ, 28 ಆಗಸ್ಟ್ 2010( 12:27 IST )
ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 150ರಿಂದ 200 ಶಾಖೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.
ಪ್ರಸಕ್ತ ಆರ್ಥಿಕ ವರ್ಷಾಂತ್ಯಕ್ಕೆ 150ರಿಂದ 200 ಶಾಖೆಗಳನ್ನು ವಿಸ್ತರಿಸಲಾಗುತ್ತಿದ್ದು, ಶೇ.50ರಷ್ಟು ಶಾಖೆಗಳನ್ನು ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಆರಂಭಿಸಲಾಗುವುದು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಯಕಾರಿ ನಿರ್ದೇಶಕ ಪರೇಶ್ ಸುಠಾನ್‌ಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶಾಖೆಗಳ ವಿಸ್ತರಣೆಯ ಯೋಜನೆಗಳನ್ನು ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಅಂತಿಮಗೊಳಿಸಿ, ಮುಂಬರುವ ಎರಡು ತ್ರೈಮಾಸಿಕ ಅವಧಿಯಲ್ಲಿ ಕಾರ್ಯಾರಂಭ ಮಾಡಲಾಗುವುದು ಎಂದು ಸುಠಾನ್‌ಕರ್ ತಿಳಿಸಿದ್ದಾರೆ.
ಜೂನ್‌ಗೆ ಮೊದಲ ತ್ರೈಮಾಸಿಕ ಅಂತ್ಯಗೊಂಡಂತೆ ಫ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ 1,725 ಶಾಖೆಗಳನ್ನು ಹೊಂದಿದ್ದು ಗುಜರಾತ್‌ವೊಂದರಲ್ಲಿ 165 ಶಾಖೆಗಳನ್ನು ಹೊಂದಿದೆ.
ಪ್ರಸ್ತುತ ಬಹರೈನ್‌ನಲ್ಲಿ ಶಾಖೆಯನ್ನು ಹೊಂದಲಾಗಿದೆ. ಹಲವು ದೇಶಗಳಲ್ಲಿ ಕೂಡಾ ಕಚೇರಿಗಳನ್ನು ಹೊಂದಿದ್ದು ಹಾಂಗ್‌ಕಾಂಗ್‌ನಲ್ಲಿ ಕೂಡಾ ಶಾಖೆಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಕಾರ್ಪೋರೇಟ್ ವ್ಯವಹಾರಗಳ ವಿಭಾಗದ ಮುಖ್ಯಸ್ಥ ನೀರಜ್ ಝಾ ತಿಳಿಸಿದ್ದಾರೆ.