ಸ್ಪೇಸ್‌ಜೆಟ್ ಸಂಸ್ಥಾಪಕ ನಿರ್ದೇಶಕರಾದ ಅಜಯ್ ಸಿಂಗ್, ಅಡಳಿತ ಮಂಡಳಿಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಸ್ಪೈಸ್‌ಜೆಟ್‌ನ ನೂತನ ಮಾಲೀಕರಾದ ಸನ್‌ಟಿವಿ ಸಂಚಾಲಕ ಕಲಾನಿಧಿ ಮಾರನ್, ನೂತನ ಅಡಳಿತ ಮಂಡಳಿಯ ಸ್ಥಾಪನೆಗೆ ಅನುವಾಗಲು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರದಂದು ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ, ಅಜಯ್ ಸಿಂಗ್ ಸೇರಿದಂತೆ ಮತ್ತೊಬ್ಬ ನಿರ್ದೇಶಕ ಅತುಲ್ ಶರ್ಮಾ ಕೂಡಾ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಜಿ ನಿರ್ದೆಶಕರಾದ ಅಜಯ್ ಸಿಂಗ್ ಮತ್ತು ಅತುಲ್ ಶರ್ಮಾ ತಮ್ಮ ರಾಜೀನಾಮೆ ಸಲ್ಲಿಸಿದ್ದು, ಕಂಪೆನಿಯ ಏಳಿಗೆಯಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ ಎಂದು ಸ್ಪೈಸ್ ಜೆಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿಶೋರ್ ಗುಪ್ತಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲಂಡನ್ ಮೂಲದ ಅನಿವಾಸಿ ಭಾರತೀಯ ಭೂಪೆಂದ್ರ್ ಕನಸಗ್ರಾ, 2005ರಲ್ಲಿ ಸ್ಪೈಸ್ ಜೆಟ್ ಸ್ಥಾಪನೆಗೆ ಕಾರಣಿಭೂತರಾಗಿದ್ದರು. ಕಂಪೆನಿಯಲ್ಲಿ ಶೇ. 4.13ರಷ್ಟು ಪಾಲನ್ನು ಹೊಂದಿದ್ದಾರೆ ೆಂದು ಕಂಪೆನಿಯ ಮೂಲಗಳು ತಿಳಿಸಿವೆ.