ಹೈ-ಸ್ಪೀಡ್ ಮೊಬೈಲ್ ಬ್ರಾಡ್‌ಬ್ಯಾಂಡ್ ಸೇವೆಗಳಿಗಾಗಿ,30 ತರಂಗಾಂತರ ಬಿಡ್‌ನಲ್ಲಿ ಯಶಸ್ವಿಯಾದ ಟೆಲಿಕಾಂ ಕಂಪೆನಿಗಳಿಗೆ, ಸೆಪ್ಟೆಂಬರ್ 1 ರಿಂದ ತರಂಗಾಂತರಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಕೇಂದ್ರದ ಟೆಲಿಕಾಂ ಸಚಿವಾಲಯ, 3ಜಿ ತರಂಗಾಂತರಗಳಿಂದ 67,000 ಕೋಟಿ ರೂಪಾಯಿ ಆದಾಯವಾಗಿದ್ದು, ಸೆಪ್ಟೆಂಬರ್ 1 ರಂದು ಟೆಲಿಕಾಂ ಕಂಪೆನಿಗಳಿಗೆ ತರಂಗಾಂತರಗಳ ಹಂಚಿಕೆಗೆ ಗಡುವ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರಕಾರ ನಿಗದಿತ ಅವಧಿಗೆ ತರಂಗಾಂತರಗಳನ್ನು ಹಂಚಿಕೆ ಮಾಡಲಿದೆಯೇ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಟೆಲಿಕಾಂ ಇಲಾಖೆಯ ರಾಜ್ಯ ಸಚಿವ ಸಚಿನ್ ಪೈಲಟ್, 2010ರ ಸೆಪ್ಟೆಂಬರ್ 1 ರಿಂದ ತರಂಗಾಂತರಗಳನ್ನು ಹಂಚಿಕೆ ಮಾಡಲಿದ್ದು, ಸೇವೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
3ಜಿ ತರಂಗಾಂತರ ಹಾಗೂ ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಸೇವೆಗಳ ತರಂಗಾಂತರಗಳ ಮಾರಾಟದಿಂದ ಕೇಂದ್ರ ಸರಕಾರ 1.06 ಲಕ್ಷ ಕೋಟಿ ರೂಪಾಯಿಗಳ ಆದಾಯ ಗಳಿಸಿದೆ.
ಭಾರ್ತಿ ಏರ್‌ಟೆಲ್, ವೊಡಾಫೋನ್, ಟಾಟಾ ಟೆಲಿಸರ್ವಿಸಸ್, ರಿಲಯನ್ಸ್ ಕಮ್ಯೂನಿಕೇಶನ್ಸ್ ಸೇರಿದಂತೆ ಏಳು ಟೆಲಿಕಾಂ ಕಂಪೆನಿಗಳು 3ಜಿ ಬಿಡ್‌ನಲ್ಲಿ ಯಶಸ್ವಿಯಾಗಿವೆ.