ದೇಶದ ಆರ್ಥಿಕತೆ ವಿಸ್ತಾರವಾಗುತ್ತಿದ್ದು, ಹಣದುಬ್ಬರ ದರದಲ್ಲಿ ಇಳಿಕೆಯಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಿ.ಸುಬ್ಬಾರಾವ್ ಹೇಳಿದ್ದಾರೆ.
ದೇಶದ ಆರ್ಥಿಕತೆ ಚೇತರಿಕೆಯೊಂದಿಗೆ ಮುಂದೆ ಸಾಗುವುದು ರಿಸರ್ವ್ ಬ್ಯಾಂಕ್‌ನ ಪ್ರಮುಖ ಧ್ಯೇಯವಾಗಿದೆ ಎಂದು ತಿಳಿಸಿದ್ದಾರೆ.
ಎಕಾನಾಮಿಕ್ ಕ್ರೈಸೆಸ್ ಆಂಡ್ ಕ್ರೈಸೆಸ್ ಇನ್ ಎಕಾನಾಮಿಕ್ಸ್ ಕುರಿತು ಸಂವಾದದಲ್ಲಿ ಪಾಲ್ಗೊಂಡ ಸುಬ್ಬಾರಾವ್, ದರ ಸ್ಥಿರತೆ ಹಾಗೂ ಆರ್ಥಿಕ ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಗುರಿಯಾಗಿಸಿಕೊಂಡು ಆರ್‌ಬಿಐ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.