ಚಿನ್ನದ ಸಂಗ್ರಹಕಾರರು ಹಾಗೂ ಆಭರಣಗಳ ತಯಾರಕರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ಚಿನ್ನದ ದರ ಪ್ರತಿ 10ಗ್ರಾಂಗೆ 5 ರೂಪಾಯಿಗಳ ಏರಿಕೆಯಾಗಿ 19,145 ರೂಪಾಯಿಗಳಿಗೆ ತಲುಪಿದೆ.
ಕೈಗಾರಿಕೋದ್ಯಮ ಕ್ಷೇತ್ರ ಹಾಗೂ ನಾಣ್ಯಗಳ ತಯಾರಕರಿಂದ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ, ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 135 ರೂಪಾಯಿಗಳ ಏರಿಕೆಯಾಗಿ 30,535 ರೂಪಾಯಿಗಳಿಗೆ ಏರಿಕೆಯಾಗಿದೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಮೌಲ್ಯ ಕುಸಿತವಾಗಿ, ಚಿನ್ನದ ದರದಲ್ಲಿ ಏರಿಕೆಯಾಗಲಿದೆ ಎನ್ನುವ ಉಹಾಪೋಹಗಳ ವರದಿಗಳ ಹಿನ್ನೆಲೆಯಲ್ಲಿ, ಚಿನ್ನದ ಖರೀದಿಯಲ್ಲಿ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಡಾಲರ್ ಎದುರಿಗೆ ಚಿನ್ನದ ದರದಲ್ಲಿ 20ಸೆಂಟ್‌ಗಳ ಏರಿಕೆಯಾಗಿ 1,237.90 ಡಾಲರ್‌ಗಳಿಗೆ ತಲುಪಿದೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.
ಹಬ್ಬದ ಸೀಜನ್ ಹಿನ್ನೆಲೆಯಲ್ಲಿ, ಚಿನ್ನಾಭರಣ ತಯಾರಕರಿಂದ ಹಾಗೂ ಹೂಡಿಕೆದಾರರಿಂದ ಚಿನ್ನದ ಖರೀದಿಯಲ್ಲಿ ಭಾರಿ ಏರಿಕೆಯಾಗಿದ್ದರಿಂದ ಚಿನ್ನದ ದರದಲ್ಲಿ ಏರಿಕೆಯಾಗಿದೆ.