ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫಾರೆಕ್ಸ್:ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಬಲವರ್ಧನೆ (Rupee | Dollar | Forex | Capital inflows)
Bookmark and Share Feedback Print
 
ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 10ಪೈಸೆ ಏರಿಕೆಯಾಗಿ 46.79 ರೂಪಾಯಿಗಳಿಗೆ ತಲುಪಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ ಅಮುದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳ ಹಾಗೂ ದುರ್ಬಲ ಶೇರುಮಾರುಕಟ್ಟೆಗಳ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ 5 ಪೈಸೆ ಚೇತರಿಕೆ ಕಂಡು 46.89/90 ರೂಪಾಯಿಗಳಿಗೆ ತಲುಪಿತ್ತು.

ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಚೇತರಿಕೆಯಾಗಿದೆ. ಆದರೆ ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯ ಚೇತರಿಕೆಯಾಗಿದ್ದರಿಂದ, ರೂಪಾಯಿ ಮೌಲ್ಯದ ಹೆಚ್ಚಳಕ್ಕೆ ಅಡ್ಡಿಯಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.

ಏತನ್ಮಧ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 218.09 ಪಾಯಿಂಟ್‌ಗಳ ಏರಿಕೆ ಕಂಡು 18,216 ಅಂಕಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ