ಸತ್ಯಂ ಕಂಪ್ಯೂಟರ್ಸ್ ಸರ್ವಿಸಸ್‌ನ 14 ಸಾವಿರ ಕೋಟಿ ರೂಪಾಯಿ ಹಗರಣದಲ್ಲಿ ಭಾಗಿಯಾದ ಸತ್ಯಂ ಕಂಪೆನಿಯ ಮಾಜಿ ವ್ಯವಸ್ಥಾಪಕ ನಿರ್ದೇಶಕ ಬಿ.ರಾಮಾರಾಜು ಸೇರಿದಂತೆ ನಾಲ್ವರಿಗೆ ಅಪೆಕ್ಸ್ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿಗಳಾದ ದೀಪಕ್ ವರ್ಮಾ ಮತ್ತು ನ್ಯಾಯಮೂರ್ತಿ ದಲ್ಬೀರ್ ಭಂಡಾರಿ ನೇತೃತ್ವದ ಪೀಠ, ಸಿಬಿಐ ಸಲ್ಲಿಸಿದ ಆರೋಪಿಗಳಿಗೆ ತಮ್ಮ ಜಾಮೀನುಗಳನ್ನು ಏಕೆ ರದ್ದುಗೊಳಿಸಬಾರದು ಎನ್ನುವ ಕುರಿತಂತೆ ವಿವರಣೆ ನೀಡಲು ಆದೇಶಿಸಿದೆ.
ಆಂಧ್ರಪ್ರದೇಶದ ಉಚ್ಚ ನ್ಯಾಯಾಲಯ, ಜುಲೈ ತಿಂಗಳ ಅವಧಿಯಲ್ಲಿ ಸತ್ಯ ಸಂಸ್ಥಾಪಕ ಬಿ.ರಾಮಲಿಂಗಾ ರಾಜು ಸಹೋದರ ರಾಮಾ ರಾಜು, ಸತ್ಯಂನ ಮಾಜಿ ಆರ್ಥಿಕ ವಿಭಾಗದ ಮುಖ್ಯಸ್ಥ ವಿ.ಶ್ರೀನಿವಾಸ್ ಹಾಗೂ ಕಂಪೆನಿಯ ಉದ್ಯೋಗಿಗಳಾದ ಜಿ. ರಾಮಕೃಷ್ಣ, ವೆಂಕಟಪತಿ ರಾಜು, ಶ್ರೀಶೈಲಂಗೆ ಜಾಮೀನು ನೀಡಿ ಆದೇಶ ಹೊರಡಿಸಿತ್ತು.
ಸತ್ಯಂ ಕಂಪ್ಯೂಟರ್ಸ್ ಕಂಪೆನಿಯ ಬ್ಯಾಂಕ್ ದಾಖಲೆಗಳನ್ನು ತಿರುಚಿದ ಆರೋಪಗಳು ಬಹಿರಂಗವಾದ ನಂತರ, ಕಳೆದ ವರ್ಷ ಸತ್ಯಂ ಸಂಸ್ಥಾಪಕ ರಾಮಲಿಂಗಾರಾಜು, ರಾಮಾ ರಾಜು ಮತ್ತು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು.