ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತ- ಚೀನಾ ದ್ವಿಪಕ್ಷೀಯ ಮಾತುಕತೆ ಆರಂಭ (India | China | Dialogue | Bilateral | Global financial)
Bookmark and Share Feedback Print
 
ಭಾರತದ ಸೇನಾಧಿಕಾರಿಗೆ ವೀಸ ನಿರಾಕರಣೆಯ ಮಧ್ಯೆಯು ಭಾರತ ಮತ್ತು ಚೀನಾದ ಅಧಿಕಾರಿಗಳು ದ್ವಿಪಕ್ಷೀಯ ಹಾಗೂ ಜಾಗತಿಕ ಆರ್ಥಿಕ ಸಮಸ್ಯೆಗಳ ಕುರಿತಂತೆ ಎರಡು ದಿನಗಳ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿ ಮಾತುಕತೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿತ್ತ ಕಾರ್ಯದರ್ಶಿ ಅಶೋಕ್ ಚಾವ್ಲಾ ನೇತೃತ್ವದ ಭಾರತೀಯ ರಿಸರ್ವ್ ಬ್ಯಾಂಕ್‌ನ ನಾಲ್ಕು ಮಂದಿ ಸದಸ್ಯರ ತಂಡ, ಚೀನಾದ ವಿತ್ತಖಾತೆ ಉಪಸಚಿವ ಗುವಾಂಗ್ ಯಾವೊ ಝು ನೇತೃತ್ವದ ತಂಡದೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಚೀನಾದ ವಿತ್ತಖಾತೆ ಸಚಿವ ಝಿ ಝುರೆನ್, ರಾತ್ರಿಯ ಭೋಜನಕೂಟವನ್ನು ಏರ್ಪಡಿಸಿದ್ದು, ಭಾರತ ತಂಡದ ಮುಖ್ಯಸ್ಥ ಚಾವ್ಲಾ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮುಕಾಶ್ಮಿರದಲ್ಲಿ ಸೇವೆ ಸಲ್ಲಿಸುತ್ತಿರುವ ಸೇನಾ ಮುಖ್ಯಸ್ಥ ಲೆಪ್ಟಿಂನೆಂಟ್ ಜನರಲ್ ಬಿ.ಎಸ್.ಜಸ್ವಾಲ್‌ಗೆ ಚೀನಾ ವೀಸಾ ನಿರಾಕರಿಸಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡವೆ ಉದ್ರಿಕ್ತತೆ ಸಂದರ್ಭ ಎದುರಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ