ಜಾಗತಿಕ ಮಾರುಕಟ್ಟೆಗಳ ಅಸ್ಥಿರ ವಹಿವಾಟಿನ ಮಧ್ಯೆಯು ಚಿನ್ನಾಭರಣಗಳ ತಯಾರಕರು ಹಾಗೂ ಹೂಡಿಕೆದಾರರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ, ಚಿನ್ನದ ದರ ಪ್ರತಿ 10ಗ್ರಾಂಗೆ 10 ರೂಪಾಯಿಗಳ ಏರಿಕೆಯಾಗಿ 19,155 ರೂಪಾಯಿಗಳಿಗೆ ತಲುಪಿದೆ.
ಕೈಗಾರಿಕೋದ್ಯಮ ಕ್ಷೇತ್ರದ ಹಾಗೂ ನಾಣ್ಯಗಳ ತಯಾರಕರಿಂದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಬೆಳ್ಳಿಯ ದರದಲ್ಲಿ ಕೂಡಾ ಪ್ರತಿ ಕೆಜಿಗೆ 65 ರೂಪಾಯಿಗಳ ಏರಿಕೆಯಾಗಿ 30,600 ರೂಪಾಯಿಗಳಿಗೆ ತಲುಪಿದೆ.
ಸಾಗರೋತ್ತರ ಮಾರುಕಟ್ಟೆಯಲ್ಲಿ, ಚಿನ್ನದ ದರ ಪ್ರತಿ ಔನ್ಸ್‌ಗೆ ಶೇ.0.3ರಷ್ಟು ಏರಿಕೆಯಾಗಿ 1,234.60 ಡಾಲರ್‌ಗಳಿಗೆ ತಲುಪಿದೆ.
ಏತನ್ಮಧ್ಯೆ, ಬೆಳ್ಳಿಯ (100 ನಾಣ್ಯಗಳು) ನಾಣ್ಯಗಳ ದರದಲ್ಲಿ ಅಲ್ಪ ಏರಿಕೆಯಾಗಿ 34,800 ರೂಪಾಯಿಗಳಿಗೆ ತಲುಪಿದೆ.