ದೇಶದ ಖ್ಯಾತ ತೈಲ ಉತ್ಪಾದಕ ಸಂಸ್ಥೆಗಳಾದ ಮುಕೇಶ್ ಅಂಬಾನಿ ಸಂಚಾಲಿತ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಅನಿಲ್ ಅಂಬಾನಿ ಸಂಚಾಲಿತ ರಿಲಯನ್ಸ್ ಪವರ್ ಘಟಕಗಳಿಗೆ ನೈಸರ್ಗಿಕ ಅನಿಲ ಸರಬರಾಜು ಹಂಚಿಕೆಗೆ ವಿದ್ಯುತ್ ಸಚಿವಾಲಯ ಸಮ್ಮತಿ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರದ ಅಧಿಕಾರಯುತ ಸಚಿವರ ಸಮಿತಿ(ಇಜಿಒಎಂ)ದೇಶದ 10 ಯೋಜನೆಗಳಿಗೆ ನೈಸರ್ಗಿಕ ಅನಿಲ ಪೂರೈಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರದ ವಿದ್ಯುತ್ ಪ್ರಾಧೀಕಾರ ವಿದ್ಯುತ್ ಘಟಕಗಳಿಗೆ ವಿವರಗಳನ್ನು ನೀಡುವಂತೆ ಆದೇಶಿಸಿದ್ದು, ರಿಲಯನ್ಸ್ ಪವರ್ ಈಗಾಗಲೇ ಸಂಪೂರ್ಣ ವಿವರಗಳನ್ನು ಸಲ್ಲಿಸಿದೆ ಎಂದು ಪ್ರಾಧೀಕಾರದ ಅಧಿಕಾರಿಗಳು ಹೇಳಿದ್ದಾರೆ.
ವಿದ್ಯುತ್ ಸಚಿವಾಲಯ ಅಧಿಕಾರಯುತ ಸಚಿವರ ಸಮಿತಿಗೆ ವಿವರಣೆ ಸಲ್ಲಿಸಿದ್ದು, ಸಮಾಲ್‌ಕೋಟ್ ವಿದ್ಯುತ್ ಘಟಕ ಸೇರಿದಂತೆ ಇತರ ಒಂಬತ್ತು ವಿದ್ಯುತ್ ಘಟಕಗಳಿಗೆ ನೈಸರ್ಗಿಕ ಅನಿಲ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರದ ವಿದ್ಯುತ್ ಖಾತೆ ಸಚಿವಾಲಯದ ಮೂಲಗಳು ತಿಳಿಸಿವೆ.