ಜಪಾನ್‌ನ ಕೈಗಾರಿಕೆ ವೃದ್ಧಿ ದರ ಹಿಂದಿನ ತಿಂಗಳಿಗೆ ಹೋಲಿಸಿದಲ್ಲಿ ಜುಲೈ ತಿಂಗಳ ಅವಧಿಯಲ್ಲಿ ಶೇ.0.3ರಷ್ಟು ಏರಿಕೆ ಕಂಡಿದೆ ಎಂದು ಅಧಿಕಾರಿಗಳು ಬಿಡುಗಡೆ ಮಾಡಿದ ಅಂಕಿ ಅಂಶಗಳಲ್ಲಿ ಬಹಿರಂಗಪಡಿಸಿದ್ದಾರೆ.
ದೇಶದ ಆರ್ಥಿಕತೆ ಚೇತರಿಕೆಗಾಗಿ ಸರಕಾರ 11 ಬಿಲಿಯನ್ ಡಾಲರ್ ಉತ್ತೇಜನ ಪ್ಯಾಕೇಜ್ ಹಾಗೂ ಆರ್ಥಿಕ ನೀತಿಗಳಲ್ಲಿ ಬದಲಾವಣೆಗಳನ್ನು ಪ್ರಕಟಿಸಿರುವುದರಿಂದ ಕೈಗಾರಿಕೆ ವೃದ್ಧಿ ದರ ಚೇತರಿಕೆಗೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ.
ಅಗಸ್ಟ್ ತಿಂಗಳ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಶೇ.1.6ರಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಶೇ.0.2ರಷ್ಟು ಏರಿಕೆ ಕಾಣುವ ಸಾಧ್ಯತೆಗಳಿವೆ ಎಂದು ವಾಣಿಜ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕೈಗಾರಿಕೆ ವೃದ್ಧಿ ದರ ಚೇತರಿಕೆ ಕಂಡಿರುವುದು ಆಶಾದಾಯಕವಾಗಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಗಳಿವೆ ಎಂದು ಮೊನೆಕ್ಸ್ ಸೆಕ್ಯೂರೀಟಿಸ್ ಮುಖ್ಯಸ್ಥ ಆರ್ಥಿಕ ತಜ್ಞ ನಾವೊಕಿ ಮುರಾಕಮಿ ಅಭಿಪ್ರಾಯಪಟ್ಟಿದ್ದಾರೆ.