ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಪ್ಪುಹಣ ಮರಳಿ ಪಡೆಯಲು ಒಪ್ಪಂದವಾಗಿಲ್ಲ:ಪ್ರಣಬ್ (Pranab Mukherjee | India-Swiss pact | L.K. Advani | Gurudas Dasgupta)
Bookmark and Share Feedback Print
 
ಸ್ವಿಟ್ಜರ್‌ಲ್ಯಾಂಡ್‌ನೊಂದಿಗಿನ ಪರಿಷ್ಕ್ರತ ದ್ವಿಗುಣ ತೆರಿಗೆ ಒಪ್ಪಂದದಿಂದ, ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿಟ್ಟಿರುವ ಕಪ್ಪು ಹಣವನ್ನು ಮರಳಿ ಸ್ವದೇಶಕ್ಕೆ ತರಲು ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಸ್ವಿಸ್ ಕಾನೂನಿನ್ವಯ ಬ್ಯಾಂಕ್‌ನ ವ್ಯವಹಾರಗಳ ಬಗ್ಗೆ ಭಾರತಕ್ಕೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಲೋಕಸಭೆಯಲ್ಲಿ ಸಚಿವ ಮುಖರ್ಜಿ ತಿಳಿಸಿದ್ದಾರೆ.

ವಿತ್ತಸಚಿವ ಪ್ರಣಬ್ ಮುಖರ್ಜಿ ಹಾಗೂ ಸ್ವಿಟ್ಜರ್‌ಲ್ಯಾಂಡ್‌ನ ವಿದೇಶಾಂಗ ಸಚಿವೆ ಮಿಚೆಲೈನ್ ಕ್ಯಾಲ್‌ಮೆ-ರೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಉಭಯ ದೇಶಗಳು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡಲಿವೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಿ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಕಪ್ಪುಹಣವನ್ನು ಮರಳಿ ಭಾರತಕ್ಕೆ ತರಲು ಸಾಧ್ಯವಾಗುವುದೇ ಎನ್ನುವ ಬಿಜೆಪಿ ನಾಯಕ ಎಲ್‌.ಕೆ.ಅಡ್ವಾಣಿ ಹಾಗೂ ಸಿಪಿಐ ಪಕ್ಷದ ನಾಯಕ ಗುರುದಾಸ್ ಗುಪ್ತಾ ಅವರ ಪ್ರಶ್ನೆಗಳಿಗೆ ಮುಖರ್ಜಿ ಉತ್ತರಿಸಿದರು.

ಭಾರತೀಯರು ಅನಧಿಕೃತವಾಗಿ ಬಿಲಿಯನ್‌ಗಟ್ಟಲೆ ಡಾಲರ್‌ಗಳ ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌‌ನ ಖಾತೆಯಲ್ಲಿ ಹೂಡಿಕೆ ಮಾಡಿರುವುದನ್ನು ದೇಶಕ್ಕೆ ಮರಳಿ ತರುವಂತೆ ಬಿಜೆಪಿ, ಕೇಂದ್ರ ಸರಕಾರವನ್ನು ಒತ್ತಾಯಿಸುತ್ತಿದೆ.

ಎರಡು ಸ್ವತಂತ್ರ ರಾಷ್ಟ್ರಗಳ ನಡುವಣ ಒಪ್ಪಂದವಾಗಿದ್ದು,ಸ್ವಿಟ್ಜರ್‌ಲ್ಯಾಂಡ್‌ ನಮ್ಮ ಆಧೀನ ರಾಷ್ಟವಲ್ಲ ಎನ್ನುವುದು ವಿರೋಧ ಪಕ್ಷಗಳು ಅರಿತಲ್ಲಿ ಒಳ್ಳೆಯದು ಎಂದು ಪ್ರಣಬ್ ಮುಖರ್ಜಿ ವ್ಯಂಗವಾಡಿದರು.
ಸಂಬಂಧಿತ ಮಾಹಿತಿ ಹುಡುಕಿ