ದೇಶಿಯ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 15 ಪೈಸೆ ಏರಿಕೆಯಾಗಿ 46.91 ರೂಪಾಯಿಗಳಿಗೆ ತಲುಪಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ, ಡಾಲರ್ ಎದುರಿಗೆ ರೂಪಾಯಿ 15 ಪೈಸೆ ಏರಿಕೆ ಕಂಡು 47.06/07 ರೂಪಾಯಿಗಳಿಗೆ ತಲುಪಿತ್ತು. ಆದರೆ, ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 15 ಪೈಸೆ ಏರಿಕೆಯಾಗಿ 46.91 ರೂಪಾಯಿಗಳಿಗೆ ತಲುಪಿದೆ.
ಏಷ್ಯಾದ ಇತರ ಕರೆನ್ಸಿಗಳ ಎದುರು ಡಾಲರ್ ಮೌಲ್ಯದಲ್ಲಿ ಕುಸಿತವಾಗಿದ್ದರಿಂದ, ರೂಪಾಯಿ ಮೌಲ್ಯದ ಮತ್ತಷ್ಟು ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಫಾರೆಕ್ಸ್ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳವಾಗಿರುವುದು ಕೂಡಾ ರೂಪಾಯಿ ಮೌಲ್ಯದ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಏತನ್ಮದ್ಯೆ, ಮುಂಬೈ ಶೇರುಪೇಟೆಯ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 119.90 ಪಾಯಿಂಟ್‌ಗಳ ಏರಿಕೆ ಕಂಡು 18,091.02 ಅಂಕಗಳಿಗೆ ತಲುಪಿದೆ.