ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಬಡ್ಡಿ ದರ ಹೆಚ್ಚಳ ಘೋಷಣೆ (Rplr | Lending rate | Hdfc)
Bookmark and Share Feedback Print
 
ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್‌,ರಿಟೇಲ್ ಪ್ರೈಮ್ ಲೆಂಡಿಂಗ್ ದರಗಳಲ್ಲಿ 50 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚಳಗೊಳಿಸಿದ್ದು, ತಜ್ಞಣದಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್, ಮಾರುಕಟ್ಟೆಗಳಲ್ಲಿನ ನಗದು ಹರಿವಿನ ಪ್ರಮಾಣಕ್ಕೆ ಕಡಿವಾಣ ಹಾಕಲು ಕಳೆದ ತಿಂಗಳು ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಏರಿಕೆ ಮಾಡಿದ ಹಿನ್ನೆಲೆಯಲ್ಲಿ, ಬ್ಯಾಂಕ್‌ಗಳು ಕೂಡಾ ಸಾಲದ ಮೇಲಿನ ಬಡ್ಡಿ ದರ ಹಾಗೂ ಠೇವಣಿ ಬಡ್ಡಿ ದರಗಳಲ್ಲಿ ಹೆಚ್ಚಳವನ್ನು ಜಾರಿಗೊಳಿಸಿವೆ.

ಕಳೆದ ಅಗಸ್ಟ್ 2008 ರ ನಂತರ ಮೊದಲ ಬಾರಿಗೆ ರಿಟೇಲ್ ಪ್ರೈಮ್ ಲೆಂಡಿಂಗ್ ದರಗಳಲ್ಲಿ ಹೆಚ್ಚಿಸಲಾಗಿದೆ.ಆರ್‌ಬಿಐ ರೆಪೋ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಏರಿಕೆಗೊಳಿಸಿದ್ದರಿಂದ ಆರ್‌ಪಿಎಲ್‌ಆರ್ ದರಗಳಲ್ಲಿ ಏರಿಕೆಗೊಳಿಸುವುದು ಅನಿವಾರ್ಯವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಏತನ್ಮಧ್ಯೆ, 30 ಲಕ್ಷ ರೂಪಾಯಿಗಳವರೆಗಿನ ಸಾಲಕ್ಕೆ ಶೇ.9.25ರಷ್ಟು ಬಡ್ಡಿಯನ್ನು ವಿಧಿಸಲಾಗುತ್ತಿದ್ದು, 30-50 ಲಕ್ಷದವರೆಗಿನ ಸಾಲಕ್ಕೆ ಶೇ.9.5ರಷ್ಟು ಬಡ್ಡಿದರ ಹಾಗೂ 50 ಲಕ್ಷಕ್ಕೂ ಹೆಚ್ಚಿನ ಸಾಲಕ್ಕೆ ಶೇ.9.75ರಷ್ಟು ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ