ಮೊಬೈಲ್ ಸೇವಾ ಸಂಸ್ಥೆಗಳು ಟಾಟಾ ಡೋಕೋಮೊ ದರ ನೀತಿಗಳನ್ನು ಅನುಸರಿಸುತ್ತಿವೆ.ಇದೀಗ ವೀಡಿಯೋಕಾನ್ ಮೊಬೈಲ್ ಸಂಸ್ಥೆ ಗ್ರಾಹಕರಿಗಾಗಿ ಪ್ರತಿ ಸೆಕೆಂಡ್ಗೆ 1ಪೈಸೆಯಂತೆ ಕರೆ ದರವನ್ನು ನಿಗದಿಪಡಿಸಿದೆ.
ವೀಡಿಯೋಕಾನ್ ಮೊಬೈಲ್ ಸಂಸ್ಥೆ, ಸ್ಥಳೀಯ ಕರೆಗಳಂತೆ ವಿದೇಶಿ ಕರೆದರಗಳನ್ನು ಕೂಡಾ ಪ್ರತಿ ಸೆಕೆಂಡ್ಗೆ 1 ಪೈಸೆ ದರವನ್ನು ಘೋಷಿಸಿದೆ.
ಅಮೆರಿಕ ಮತ್ತು ಕೆನಡಾ ದೇಶಗಳಿಗೆ ಕರೆ ದರವನ್ನು ಪ್ರತಿ ಸೆಕೆಂಡ್ಗೆ 1 ಪೈಸೆಯಂತೆ 30 ದಿನಗಳ ಅವಧಿಗೆ 57 ರೂಪಾಯಿಗಳ ಬೋನಸ್ ಪ್ಯಾಕೇಜ್ ಘೋಷಿಸಿದೆ. ಮತ್ತೊಂದು ಯೋಜನೆಯಲ್ಲಿ ಸಿಂಗಾಪೂರ್ ಮತ್ತು ಮಲೇಷಿಯಾ ದೇಶಗಳಿಗೆ ಪ್ರತಿ ನಿಮಿಷಕ್ಕೆ 1.69 ರೂಪಾಯಿ ದರ ನಿಗದಿಪಡಿಸಿದೆ.
ಅಮೆರಿಕ ಮತ್ತು ಕೆನಡಾ ದೇಶಗಳಿಗೆ ಕರೆ ಮಾಡುವ ಗ್ರಾಹಕರಿಗಾಗಿ, ಪ್ರತಿ ನಿಮಿಷಕ್ಕೆ 99 ಪೈಸೆಯಂತೆ 22 ರೂಪಾಯಿಗಳ ಬೋನಸ್ ಪ್ಯಾಕೇಜ್ ಪಡೆಯಬಹುದಾಗಿದೆ ಎಂದು ವೀಡಿಯೋಕಾನ್ ಅಧಿಕಾರಿಗಳು ತಿಳಿಸಿದ್ದಾರೆ.