ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಟೆಲಿಕಾಂ ಕ್ಷೇತ್ರ ಹೂಡಿಕೆಯಲ್ಲಿ ಅಗ್ರಸ್ಥಾನ (Telecom sector | Foreign investors | Favourite | India)
Bookmark and Share Feedback Print
 
ಪ್ರಸಕ್ತ ವರ್ಷದ ಆರಂಭಿಕ ಎರಡು ತಿಂಗಳುಗಳ ಅವಧಿಯಲ್ಲಿ ಭಾರತದ ಟೆಲಿಕಾಂ ಕ್ಷೇತ್ರ 4,023 ಕೋಟಿ ರೂ ವಿದೇಶಿ ನಿರೇ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ರೇಡಿಯೋ ಪಾಗಿಂಗ್, ಮೊಬೈಲ್, ಬೇಸಿಕ್ ಟೆಲಿಫೋನ್ ಸರ್ವಿಸಸ್ ಸೇರಿದಂತೆ ಟೆಲಿಕಾಂ ಕ್ಷೇತ್ರ ಏಪ್ರಿಲ್-ಮೇ ತಿಂಗಳ ಅವಧಿಯಲ್ಲಿ 3,055 ಕೋಟಿ ರೂ ವಿದೇಶಿ ಬಂಡವಾಳವನ್ನು ಆಕರ್ಷಿಸಿದೆ ಎಂದು ವಾಣಿಜ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ದೇಶದ ಸೇವಾ ಕ್ಷೇತ್ರ ಏಪ್ರಿಲ್- ಮೇ ತಿಂಗಳ ಅವಧಿಯಲ್ಲಿ 587 ಮಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಆಕರ್ಷಿಸಿ ಎರಡನೇ ಸ್ಥಾನದಲ್ಲಿದೆ.ಉಕ್ಕು ಕ್ಷೇತ್ರ (461 ಮಿಲಿಯನ್ ಡಾಲರ್) ಮತ್ತು ವಿದ್ಯುತ್ ಕ್ಷೇತ್ರ (313 ಮಿಲಿಯನ್ ಡಾಲರ್) ವಿದೇಶಿ ಬಂಡವಾಳವನ್ನು ಆಕರ್ಶಿಸಿ ಕ್ರಮವಾಗಿ ನಂತರದ ಸ್ಥಾನವನ್ನು ಪಡೆದಿವೆ.

ಏಪ್ರಿಲ್-ಮೇ 2010-11ರ ಅವಧಿಯಲ್ಲಿ ಮಾರಿಶಿಯಸ್‌ನಿಂದ 1.29 ಬಿಲಿಯನ್ ಡಾಲರ್, ಸಿಂಗಾಪೂರ್‌ನಿಂದ 854 ಮಿಲಿಯನ್ ಡಾಲರ್, ಜಪಾನ್‌ನಿಂದ 369 ಮಿಲಿಯನ್ ಡಾಲರ್ ಹಾಗೂ ನೆದರ್‌ಲ್ಯಾಂಡ್‌ನಿಂದ 298 ಮಿಲಿಯನ್ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ