ಸಾಗರೋತ್ತರ ಮಾರುಕಟ್ಟೆಗಳ ಚೇತರಿಕೆಯ ವಹಿವಾಟು ಹಾಗೂ ಹೂಡಿಕೆದಾರರಿಂದ ಚಿನ್ನದ ಖರೀದಿಯಲ್ಲಿ ಏರಿಕೆಯಿಂದಾಗಿ ಚಿನ್ನ ಮತ್ತು ಬೆಳ್ಳಿಯ ದರಗಳು ದಾಖಲೆಯ ಏರಿಕೆಯ ಕಂಡಿವೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಚಿನ್ನದ ದರ ಇಂದಿನ ಆರಂಭಿಕ ವಹಿವಾಟಿನಲ್ಲಿ ಪ್ರತಿ 10ಗ್ರಾಂಗೆ 195 ರೂಪಾಯಿಗಳ ಏರಿಕೆಯಾಗಿ 19,140 ರೂಪಾಯಿಗಳಿಗೆ ದಾಖಲೆಯ ಏರಿಕೆಯಾಗಿದೆ. ಬುಧವಾರದ ವಹಿವಾಟಿನ ಮುಕ್ತಾಯಕ್ಕೆ 18,945 ರೂಪಾಯಿಗಳಿಗೆ ತಲುಪಿತ್ತು.
ಅಂತಾರಾಷ್ಟ್ರೀಯ ಮಾರುಕಟ್ಟೆಯ ವಹಿವಾಟಿನಲ್ಲಿ ಭಾರಿ ಚೇತರಿಕೆಯಾಗಿದ್ದರಿಂದ,ಹೂಡಿಕೆದಾರರು ಹಾಗೂ ಚಿನ್ನಾಭರಣಗಳ ವ್ಯಾಪಾರಿಗಳು ಚಿನ್ನದ ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದಾರೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಕೈಗಾರಿಕೆ ಕ್ಷೇತ್ರದಿಂದ ಮತ್ತು ನಾಣ್ಯಗಳ ತಯಾರಕರಿಂದ ಬೆಳ್ಳಿಯ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಬೆಳ್ಳಿಯ ದರದಲ್ಲಿ ಕೂಡಾ ಭಾರಿ ಏರಿಕೆಯಾಗಿದೆ ಎಂದು ಚಿನಿವಾರ ಪೇಟೆಯ ವರ್ತಕರು ಅಭಿಪ್ರಾಯಪಟ್ಟಿದ್ದಾರೆ.