ಮಾಹಿತಿ ತಂತ್ರಜ್ಞಾನ ವಹಿವಾಟಿನ ಮುಖ್ಯ ಯೋಜನಾ ಅಧಿಕಾರಿಯಾಗಿ ರಿಶಾದ್ ಪ್ರೇಮ್‌ಜಿಯವರನ್ನು ನೇಮಕ ಮಾಡಲಾಗಿದೆ ಎಂದು ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿರುವ ವಿಪ್ರೋ ಘೋಷಿಸಿದೆ.
ಅಜೀಂ ಪ್ರೇಮ್‌ಜಿ ಪುತ್ರ ರಿಶಾದ್ ಪ್ರೇಮ್‌ಜಿ ಮಾಹಿತಿ ತಂತ್ರಜ್ಞಾನ ವಹಿವಾಟಿನ ಮುಖ್ಯ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ವಿಪ್ರೋ ಟೆಕ್ನಾಲಾಜೀಸ್ ಹಿರಿಯ ಉಪಾಧ್ಯಕ್ಷ (ಮಾನವ ಸಂಪನ್ಮೂಲ) ಸೌರಭ್ ಗೋವಿಲ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಿಶಾದ್ ಪ್ರೇಮ್‌ಜಿ ಪ್ರಸ್ತುತ (ಖಜಾಂಚಿ ಮತ್ತು ಹೂಡಿಕೆ ವಹಿವಾಟು) ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮುಖ್ಯ ಯೋಜನಾಧಿಕಾರಿಯಾಗಿದ್ದ ಲಕ್ಷ್ಮಿನಾರಾಯಣಾ ಅವರ ಸ್ಥಾನದಲ್ಲಿ ಕೆ.ಆರ್.ರಿಶಾದ್ ಮುಂದುವರಿಯಲಿದ್ದು, ಸುರೇಶ್ ವಾಸ್ವಾನಿ ಮತ್ತು ಗಿರೀಶ್ ಪರಂಜಪೆಯವರೊಂದಿಗೆ ಜಂಟಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಿಶಾದ್, ಹಾರ್ವರ್ಡ್ ಬಿಜಿನೆಸ್ ಸ್ಕೂಲ್‌ನಲ್ಲಿ ಎಂಬಿಎ ಪದವೀಧರರಾಗಿದ್ದು, ವಿಪ್ರೋ ಸೇರ್ಪಡೆಗೆ ಮುಂಚೆ ಬೇನ್ ಆಂಡ್ ಕಂಪೆನಿ ಕನ್ಸಲ್‌ಟಂಟ್ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ವಿಪ್ರೋ ಮೂಲಗಳು ತಿಳಿಸಿವೆ.