ವಿಶ್ವಬ್ಯಾಂಕ್ನಿಂದ ಪಾಕಿಸ್ತಾನಕ್ಕೆ 1ಬಿಲಿಯನ್ ಡಾಲರ್ ಸಾಲ
ವಾಷಿಂಗ್ಟನ್, ಗುರುವಾರ, 2 ಸೆಪ್ಟೆಂಬರ್ 2010( 17:23 IST )
ಪಾಕಿಸ್ತಾನದ ಪ್ರವಾಹ ಪ್ರಕೋಪದಲ್ಲಿ ಸಿಲುಕಿದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ನೆರುವು ನೀಡುವುದನ್ನು ಮುಂದುವರಿಸಿರುವ ವಿಶ್ವಬ್ಯಾಂಕ್,ಇದೀಗ 1ಬಿಲಿಯನ್ ಡಾಲರ್ ನೆರವು ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವ ಬ್ಯಾಂಕ್ ಅಧ್ಯಕ್ಷ ರಾಬರ್ಟ್ ಬಿ.ಝೊಯಿಲಿಕ್, ಪಾಕಿಸ್ತಾನದ ವಿತ್ತಸಚಿವ ಹಫೀಜ್ ಶೇಖ್ ಅವರಿಗೆ ವಿಶ್ವ ಬ್ಯಾಂಕ್ ನಿರ್ಧಾರದ ಮಾಹಿತಿ ನೀಡಲಾಗಿದೆ. ಪ್ರವಾಹ ಸಂತ್ರಸ್ಥರಿಗೆ ಬೆಂಬಲವನ್ನು ಮುಂದುವರಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಪಾಕಿಸ್ತಾನದಲ್ಲಿ ವರುಣನ ಅವಕೃಪೆಯಿಂದಾಗಿ ಉಹೆಗೂ ಮೀರಿದ ನಷ್ಟವಾಗಿದೆ.ಜನತೆ ಕಂಗಾಲಾಗಿರುವುದರಿಂದ ವಿಶ್ವದ ರಾಷ್ಟ್ರಗಳ ಬೆಂಬಲ ಅಗತ್ಯವಾಗಿದೆ ಎಂದು ಜೂಲಿಕ್ ತಿಳಿಸಿದ್ದಾರೆ.