ಅಂತಾರಾಷ್ಟ್ರೀಯ ದ್ವಿಪಕ್ಷೀಯ ಸಹಕಾರ ಒಪ್ಪಂದ ಕುರಿತಂತೆ ಭಾರತ ಮತ್ತು ಚೀನಾದ ಉನ್ನತ ಮಟ್ಟದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಭಾರತದ ವಿತ್ತ ಇಲಾಖೆ ಕಾರ್ಯದರ್ಶಿ ಅಶೋಕ್ ಚಾವ್ಲಾ ಮತ್ತು ಚೀನಾದ ವಿತ್ತಖಾತೆ ಉಪಸಚಿವ ಝು ಗುವಾಂಗ್ ಯಾವೊ ನೇತೃತ್ವದ ನಿಯೋಗಗಳು, ಅಂತಾರಾಷ್ಟ್ರೀಯ ಹಾಗೂ ದ್ವಿಪಕ್ಷೀಯ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಜಮ್ಮು ಖಾಶ್ಮೀರದ ಸೇನಾ ಮುಖ್ಯಸ್ಥ ಲೆಪ್ಟಿಂನೆಂಟ್ ಜನರಲ್ ಬಿಎಸ್.ಜಸ್ವಾಲ್‌ಗೆ ವೀಸಾ ನಿಷೇಧಿಸಿರುವುದರಿಂದ ಭಾರತ ಮತ್ತು ಚೀನಾ ದೇಶಗಳ ಮಧ್ಯೆ ಭಿನ್ನಾಭಿಪ್ರಾಯಗಳು ಉಂಟಾದ ಹಿನ್ನೆಲೆಯಲ್ಲಿ ಸಭೆಯನ್ನು ಸ್ಥಗಿತಗೊಳಿಸಲಾಗಿತ್ತು.
ಚೀನಾ ಭಾರತದ ಉತ್ತರ ವಲಯದ ಸೇನಾ ಮುಖ್ಯಸ್ಥರಿಗೆ ವೀಸಾ ನಿರಾಕರಿಸಿದ್ದರಿಂದ, ಕೇಂದ್ರ ಸರಕಾರ ಚೀನಾ ದೇಶಕ್ಕೆ ಭಾರಿ ಪ್ರತಿಭಟನೆಯನ್ನು ಸಲ್ಲಿಸಿತ್ತು.