ಸಕ್ಕರೆ ಕ್ಷೇತ್ರವನ್ನು ಸರಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ, ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಸಕ್ಕರೆಯನ್ನು ಮಾರಾಟ ಮಾಡುವ ಸ್ವಾತಂತ್ರ್ಯವನ್ನು ನೀಡುವ ಪ್ರಸ್ತಾವನೆ ಶ್ಲಾಘನಿಯ ಎಂದು ಪ್ರಧಾನಿಯವರ ನಿಲುವಿಗೆ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ, ಸಕ್ಕರೆ ಕಾರ್ಖಾನೆಗಳು ಸರಕಾರದ ನಿಯಂತ್ರಣದಲ್ಲಿದ್ದು, ಸರಕಾರ ನಿಗದಿಪಡಿಸಿದಷ್ಟು ಮಾತ್ರ ಪ್ರತಿ ತಿಂಗಳು ಮುಕ್ತ ಮಾರುಕಟ್ಟೆಗೆ ಹಾಗೂ ರೇಶನ್ ಅಂಗಡಿಗಳಿಗೆ ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಅಕ್ಟೋಬರ್ ತಿಂಗಳಿನಿಂದ ಸಕ್ಕರೆ ಸೀಜನ್ ಆರಂಭವಾಗಲಿದ್ದು, ಬಂಪರ ಬೆಳೆಯ ನಿರೀಕ್ಷೆಯಿಂದಾಗಿ, ಸರಕಾರದ ನಿಯಂತ್ರಣದಿಂದ ಸಕ್ಕರೆ ಕ್ಷೇತ್ರವನ್ನು ಮುಕ್ತಗೊಳಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್‌ರನ್ನು ಭೇಟಿ ಮಾಡಿದ ಕೇಂದ್ರ ಆಹಾರ ಮತ್ತು ಕೃಷಿ ಖಾತೆ ಸಚಿವ ಶರದ್ ಪವಾರ್ ಸಕ್ಕರೆ ಕ್ಷೇತ್ರವನ್ನು ಸರಕಾರದಿಂದ ಮುಕ್ತಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.