ಪಾಕಿಸ್ತಾನ:ಭತ್ತದ ರಫ್ತು ವಹಿವಾಟಿನಲ್ಲಿ ಶೇ.40ರಷ್ಟು ಕುಸಿತ
ನವದೆಹಲಿ, ಶುಕ್ರವಾರ, 3 ಸೆಪ್ಟೆಂಬರ್ 2010( 11:22 IST )
ಪಾಕಿಸ್ತಾನ ಸರಕಾರದ ಆದಾಯದ ಪ್ರಮುಖ ಮೂಲವಾಗಿರುವ ಭತ್ತದ ರಫ್ತು ವಹಿವಾಟಿನಲ್ಲಿ ಶೇ.40 ರಷ್ಟು ಕುಸಿತವಾಗಿದೆ.
ಪ್ರವಾಹ ಪ್ರಕೋಪದಿಂದ ತತ್ತರಿಸಿದ ಹಿನ್ನೆಲೆಯಲ್ಲಿ, 2010-11ರ ಅವಧಿಯ ಭತ್ತದ ಇಳುವರಿಯಲ್ಲಿ 2.3 ಮಿಲಿಯನ್ ಟನ್‌ಗಳನ್ನು ಕೊರತೆಯಾಗಲಿದೆ ಎಂದು ಅಮೆರಿಕದ ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ರಫ್ತು ವಹಿವಾಟಿನಲ್ಲಿ ಭತ್ತ ರಫ್ತು ವಹಿವಾಟು ಪ್ರಮುಖವಾಗಿ ಎರಡನೇ ಸ್ಥಾನದಲ್ಲಿದ್ದು, ಇಳುವರಿಯ ಕೊರತೆಯಿಂದಾಗಿ ರಫ್ತು ವಹಿವಾಟಿನಲ್ಲಿ ಕುಸಿತವಾಗಿ ಸರಕಾರದ ಆದಾಯಕ್ಕೆ ಆರ್ಥಿಕ ಬಿಕ್ಕಟ್ಟು ತರುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕಳೆದ 2009ರ ಅವಧಿಯಲ್ಲಿ 2ಬಿಲಿಯನ್ ಡಾಲರ್ ಭತ್ತದ ರಫ್ತು ವಹಿವಾಟು ಮಾಡಲಾಗಿತ್ತು.ಪಾಕಿಸ್ತಾನ ದೇಶಧ ಭತ್ತ ಉತ್ಪಾದನೆಯಲ್ಲಿ ಶೇ.50ರಿಂದ ಶೇ.60ರಷ್ಟು ಭತ್ತವನ್ನು ವಿದೇಶಗಳಿಗೆ ರಫ್ತು ಮಾಡುತ್ತಿದೆ.