ಹೈದ್ರಾಬಾದ್, ಶುಕ್ರವಾರ, 3 ಸೆಪ್ಟೆಂಬರ್ 2010( 16:40 IST )
ಸತ್ಯಂ ಕಂಪ್ಯೂಟರ್ ಸರ್ನಿಸಸ್‌ನ ಬಹುಕೋಟಿ ಹಗರಣದಲ್ಲಿ ಸಿಲುಕಿದ ಸತ್ಯ ಸಂಸ್ಥೆಯ ಮಾಜಿ ಉದ್ಯೋಗಿ, ತಮ್ಮ ಪ್ರಕರಣದಲ್ಲಿ ತಾವೇ ವಾದಿಸುವುದಾಗಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಸಮ್ಮತಿ ಸೂಚಿಸಿದೆ.
21ನೇ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ಜಿ.ರಾಮಕೃಷ್ಣ ನೇತೃತ್ವದ ಪೀಠ, ಸತ್ಯಂ ಕಂಪ್ಯೂಟರ್ಸ್‌ನಲ್ಲಿ (ಆರ್ಥಿಕ) ಉಪಾಧ್ಯಕ್ಷರಾಗಿದ್ದ ಜಿ.ರಾಮಕೃಷ್ಣ ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿದ್ದಾರೆ.
ಸಿಬಿಐ ಸಲ್ಲಿಸಿದ ಆರೋಪಗಳ ಬಗ್ಗೆ ತಮ್ಮ ಪರವಾಗಿ ತಾವೇ ವಾದಿಸುವುದಾಗಿ ರಾಮಕೃಷ್ಣ ಅವರು ನ್ಯಾಯಾಲಯದಲ್ಲಿ ಮನವಿಯನ್ನು ಸಲ್ಲಿಸಿದ್ದರು.