ಹೈದ್ರಾಬಾದ್, ಶುಕ್ರವಾರ, 3 ಸೆಪ್ಟೆಂಬರ್ 2010( 17:32 IST )
PTI
ದೇಶದ ಪಟ್ಟಣ ನಗರವಾಸಿಗಳ ಗುರಿಯಾಗಿಸಿಕೊಂಡು ಒಂದು ರೂಪಾಯಿ ಪಾವತಿಸಿ ಬ್ಯಾಂಕ್ ಖಾತೆಯನ್ನುಪಡೆಯಿರಿ ಎಂದು ಘೋಷಿಸಿದ್ದ ಸರಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದೀಗ ಕೋಟ್ಯಾಧಿಪತಿಗಳನ್ನು ಗುರಿಯಾಗಿಸಿ ಯೋಜನೆಯನ್ನು ರೂಪಿಸಿದೆ.
ಶ್ರೀಮಂತರನ್ನು ಗುರಿಯಾಗಿಸಿಕೊಂಡ ಎಸ್‌ಬಿಐ ಬ್ಯಾಂಕ್, ಬ್ಯಾಂಕ್ ಖಾತೆಯನ್ನು ತೆರೆಯಲು(ಅಹ್ವಾನದ ಮೇರೆಗೆ ಮಾತ್ರ) ಕನಿಷ್ಠ 1ಕೋಟಿ ರೂಪಾಯಿಗಳ ಪಾವತಿಸಿದಲ್ಲಿ ಮಾತ್ರ ಖಾತೆಯನ್ನು ತೆರೆಯವಂತಹ ಶಾಖೆಯನ್ನು ನಗರದಲ್ಲಿ ಇಂದು ಉದ್ಘಾಟಿಸಲಾಗಿದೆ.
ಕೋಹಿನೂರ್ ಬಂಜಾರಾ ಪ್ರೀಮಿಯಮ್ ಬ್ಯಾಕಿಂಗ್ ಸೆಂಟರ್ (ಕೋಹಿನೂರ್ ವಜ್ರ ಪತ್ತೆಯಾದ ನಗರವಾಗಿದ್ದರಿಂದ) ಎಂದು ಎಸ್‌ಬಿಐ ಶಾಖೆಗೆ ಹೆಸರಿಸಲಾಗಿದ್ದು, 4,000 ಚದುರ ಅಡಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ವಿಶೇಷ ಬ್ಯಾಕಿಂಗ್ ಸೌಲಭ್ಯಗಳನ್ನು ಹೊಂದಿರುವ ಬ್ಯಾಂಕ್, 24/7 ಲಾಕರ್‌ಗಳು ವ್ಯವಸ್ಥಾಪಕರು, ಬ್ಯಾಂಕ್ ಅವಧಿ ಹೆಚ್ಚಳ ಮನೆಬಾಗಿಲಿಗೆ ಬಂದು ಕರೆದುಕೊಂಡು ಹೋಗುವ ಸೌಲಭ್ಯ ಮತ್ತೆ ಮರಳಿಸುವ ಸೇವೆ ಸೇರಿದಂತೆ ಪಂಚತಾರಾ ಸೌಲಭ್ಯಗಳನ್ನು ಹೊಂದಿದೆ.
ಇಲ್ಲಿಯವರೆಗೆ 50 ಖಾತೆಗಳನ್ನು ತೆರೆಯಲಾಗಿದೆ. ಪ್ರಸಕ್ತ ವ್ರಷಾಂತ್ಯಕ್ಕೆ ಮತ್ತೆ 150 ಖಾತೆಗಳನ್ನು ತೆರೆಯುವ ಆತ್ಮವಿಶ್ವಾಸವಿದೆ ಎಂದು ಎಸ್‌ಬಿಐ ಮುಖ್ಯ ಪ್ರಧಾನ ವ್ಯವಸ್ಥಾಪಕ ಶಿವಾಕುಮಾರ್ ತಿಳಿಸಿದ್ದಾರೆ.