ಹೊಸದಾಗಿ ತಂದ ಕಾರು ಫಳಫಳ ಅಂತಾ ಹೊಳೆಯುತ್ತಿರುತ್ತದೆ.ಆದರೆ ಅದಕ್ಕೆ ಚಿಕ್ಕ ಅಪಘಾತವಾದಲ್ಲಿ ಮರುಮಾರಾಟದಲ್ಲಿ ಮೌಲ್ಯದಲ್ಲಿ ಭಾರಿ ವ್ಯತ್ಯಾಸವಾಗುತ್ತದೆ.ಆದ್ದರಿಂದ ಕೆಲ ಸರಳ ಕ್ರಮಗಳನ್ನು ಅನುಸರಿಸುವುದರಿಂದ,ನಿಮ್ಮ ಕೌರಿನ ಮೌಲ್ಯವನ್ನು ಹೆಚ್ಚಿಸಬಹುದಾಗಿದೆ.
1 ಕಾರಿನ ಬಣ್ಣದ ಆಯ್ಕೆ
ಪ್ರಕಾಶಮಾನವಾಗಿ ಹೊಳೆಯುವ ಬಣ್ಣದ ಕಾರುಗಳು ನೋಡಲು ಸುಂದರವಾಗಿದ್ದರೂ ಕೆಲ ದಿನಗಳ ನಂತರ ಪ್ರಕಾಶತೆಯನ್ು ಕಳೆದುಕೊಳ್ಳುವುದರಿಂದ ಹೆಚ್ಚಿನ ದರದಲ್ಲಿ ಮರುಮಾರಾಟವಾಗುವುದು ತುಂಬಾ ಕಷ್ಟವಾಗುತ್ತದೆ. ಒಂದು ವೇಳೆ ನಿಮಗೆ ಮರು ಮಾರಾಟದ ಮೌಲ್ಯದ ಅಗತ್ಯವಿದ್ದಲ್ಲಿ ಕಪ್ಪು, ಬಿಳಿ, ಅಥವಾ ಬೆಳ್ಳಿಯ ಬಣ್ಣದ ಕಾರುಗಳನ್ನು ಖರೀದಿಸಿ.
2 ನಿಯಮಿತ ವ್ಯವಸ್ಥಾಪನೆ
ನಿಗದಿತ ಅವಧಿಗೆ ನಿಮ್ಮ ಕಾರನ್ನು ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋಗಿ. ನೀವು ಚೆಕಪ್ ಮಾಡಿಸಿದ ದಾಖಲೆಗಳನ್ನು ಸೂಕ್ತ ರೀತಿಯಲ್ಲಿಡಿ. ನೀವು ಕಾರು ಮಾರಾಟ ಮಾಡುವ ಅನಿವಾರ್ಯತೆ ಎದುರಾದಾಗ, ಕಾರನ್ನು ಖರೀದಿಸುವವರಿಗೆ ನಿಮ್ಮ ಕಾರಿನ ರಿಪೇರಿಯ ಚೆಕಪ್ ದಾಖಲೆಗಳನ್ನು ತೋರಿಸಿದಲ್ಲಿ ಹೆಚ್ಚಿನ ಮೌಲ್ಯವನ್ನು ಪಡೆಯಬಹುದಾಗಿದೆ.
3 ಕಾರಿನಲ್ಲಿ ಸಿಗರೇಟು, ಭೋಜನ ,ಡ್ರಿಂಕ್ಸ್ ಬೇಡ
ಸಿಗರೇಟು ವಾಸನೆ, ಆಹಾರದ ವಾಸನೆ ಮತ್ತು ಕುತಡ ವಾಸನೆಯಿಂದಾಗಿ ನಿಮ್ಮ ಮರು ಮಾರಾಟದ ಕಾರಿನ ದರ ಧರೆಗಿಳಿದು ಹೋಗುತ್ತದೆ. ಕಾರಿನೊಳಗೆ ಸಿಗರೇಟು ಸೇದುವುದಾಗಲಿ, ಆಹಾರ ಸೇವಿಸುವುದಾಗಲಿ ಅಥವಾ ಮಧ್ಯಪಾನ ಸೇವಿಸುವುದರಿಂದ ದೂರವಿರಿ. ನಿಮ್ಮ ಕಾರಿನ ಒಳಭಾಗವನ್ನು ನಿಗದಿತ ಅವಧಿಗೆ ಶುಚಿಯಾಗಿರಿಸಿಕೊಳ್ಳಿ.
4 ನಿಮ್ಮ ಕಾರು ತುಕ್ಕು ಹಿಡಿಯುವುದರಿಂದ ರಕ್ಷಿಸಿ
ನೀವು ಒಂದು ವೇಳೆ ಹೆಚ್ಚಿನ ಹ್ಯೂಮಿಡಿಟಿ ಹೊಂದಿರುವ ಪ್ರದೇಶದಲ್ಲಿ ವಾಸಿಸುತ್ತಿದ್ದಲ್ಲಿ ಮಳೆ ಅಥವಾ ಮಂಜಿನಿಂದ ಕಾರಿಗೆ ವೇಗವಾಗಿ ತುಕ್ಕು ಹಿಡಿಯುವ ಸಾಧ್ಯತೆಗಳಿರುವುದರಿಂದ ಮರು ಮಾರಾಟದ ಮೌಲ್ಯಕ್ಕೆ ಅಡ್ಡಿಯಾಗುತ್ತದೆ. ನಿಮ್ಮ ಕಾರನ್ನು ಗ್ಯಾರೇಜ್‌ನಲ್ಲಿ ಬಿಟ್ಟು ಕವರ್ ಹಾಕಿದಲ್ಲಿ ತುಕ್ಕುಹಿಡಿಯುವ ಸಾಧ್ಯತೆಗಳು ತೀರಾ ಕಡಿಮೆಯಿರುತ್ತವೆ.
5 ಕಾರು ನಿರ್ವಹಣೆಯಲ್ಲಿ ಅಲಕ್ಷ್ಯತೆ ಬೇಡ
ನಿಮ್ಮ ಕಾರಿನ ಮೇಲೆ ಚಿಕ್ಕ ಗೆರೆಗಳು ಅಥವಾ ಗುಳಿಗಳು ಕಂಡು ಬಂದಲ್ಲಿ ಕೂಡಲೇ ಕಾರನ್ನು ಮೆಕ್ಯಾನಿಕ್ ಬಳಿ ತೆಗೆದುಕೊಂಡು ಹೋಗಿ ರಿಪೇರಿ ಮಾಡಿಸುವುದನ್ನು ಮರೆಯಬೇಡಿ. ಚಿಕ್ಕ ತಪ್ಪುಗಳಿಂದ ಮರು ಮಾರಾಟದ ಹೆಚ್ಚಿನ ಹಣವನ್ನು ಕಳೆದುಕೊಳ್ಳಬೇಡಿ.