ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್, ಸಂಸ್ಥಾಪಕ ಸುನೀಲ್ ಮಿತ್ತಲ್ ಪುತ್ರನನ್ನು ವ್ಯವಸ್ಥಾಪಕರನ್ನಾಗಿ ನೇಮಕ ಮಾಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸುನೀಲ್ ಮಿತ್ತಲ್ ಅವರ ಅವಳಿ ಪುತ್ರರಲ್ಲಿ ಒಬ್ಬರಾದ 23 ವರ್ಷ ವಯಸ್ಸಿನ ಶ್ರಾವಿನ್ ಭಾರ್ತಿ ಮಿತ್ತಲ್, ಭಾರ್ತಿ ಏರ್‌ಟೆಲ್ ಕಂಪೆನಿಯ ಆಫ್ರಿಕಾದ ಅಂತಾರಾಷ್ಟ್ರೀಯ ವ್ಯವಹಾರಗಳ ಉಸ್ತುವಾರಿಯನ್ನು ವಹಿಸಲಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವಾರದ ಅವಧಿಯಲ್ಲಿ ವಿಪ್ರೋ ಸಂಸ್ಥೆಯ ಸಂಸ್ಥಾಪಕ ಅಜೀಂ ಪ್ರೇಮ್‌ಜಿ, ತಮ್ಮ ಪುತ್ರನನ್ನು ಕಂಪೆನಿಯ ಮುಖ್ಯ ಯೋಜನಾಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಟಾಟಾ ಗ್ರೂಪ್ ಮುಖ್ಯಸ್ಥರಾದ ರತನ್ ಟಾಟಾ ಮುಂಬರುವ 2012ರಲ್ಲಿನಿವೃತ್ತಿಯಾಗಲಿರುವುದರಿಂದ, ಅವರ ಸ್ಥಾನಕ್ಕೆ ಉತ್ತರಾಧಿಕಾರಿಯ ಹುಡುಕಾಟ ಆರಂಭವಾಗಿದ್ದು, ಕುಟುಂಬದ ವ್ಯಕ್ತಿಯೊಬ್ಬರನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.