ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದೇಶದ ಕಾಫಿ ರಫ್ತು ವಹಿವಾಟಿನಲ್ಲಿ ಶೇ.57ರಷ್ಟು ಹೆಚ್ಚಳ (Coffee export | Coffee Board | Overseas market | Demand)
Bookmark and Share Feedback Print
 
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಕಾಫಿ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ, ದೇಶದ ಕಾಫಿ ರಫ್ತು ವಹಿವಾಟಿನಲ್ಲಿ ಶೇ.57ರಷ್ಟು ಏರಿಕೆ ಕಂಡಿದೆ ಎಂದು ಕಾಫಿ ಮಂಡಳಿ ತಿಳಿಸಿದೆ.

ಕಳೆದ ವರ್ಷದ ಅವಧಿಯಲ್ಲಿ ಕಾಫಿ ರಫ್ತು ವಹಿವಾಟು 1.30 ಲಕ್ಷ ಟನ್‌ಗಳಿಗೆ ತಲುಪಿತ್ತು ಎಂದು ಕಾಫಿ ಅಡಳಿತ ಮಂಡಳಿಯ ಮೂಲಗಳು ತಿಳಿಸಿವೆ.

ಜನೆವರಿ-ಸೆಪ್ಟೆಂಬರ್ 2010ರ ಅವಧಿಯಲ್ಲಿ ಒಟ್ಟು ಕಾಫಿ ಮಾರಾಟ 1.74 ಲಕ್ಷ ಟನ್‌ಗಳಿಗೆ ಏರಿಕೆ ಕಂಡಿದೆ.ಏತನ್ಮಧ್ಯೆ, 30,793 ಟನ್‌ ಕಾಫಿಯನ್ನು ಮರು ರಫ್ತು ಮಾಡಲಾಗಿದೆ.

ರೊಬುಸ್ಟಾ ಪ್ರಭೇಧದ ಕಾಫಿ ರಫ್ತು ವಹಿವಾಟು 72,738 ಟನ್‌ಗಳಿಂದ 1,12,325 ಟನ್‌ಗಳಿಗೆ ಏರಿಕೆಯಾಗಿದೆ. ಅರೇಬಿಕಾ ಪ್ರಭೇಧದ ಕಾಫಿ ರಫ್ತು ವಹಿವಾಟು 23,507 ಟನ್‌ಗಳಿಂದ 39,241 ಟನ್‌ಗಳಿಗೆ ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ