ನೇರ ತೆರಿಗೆ ಪಾವತಿ ಪದ್ದತಿ(ಡಿಟಿಸಿ) ಮುಂದಿನ ವರ್ಷ ಜಾರಿಗೆ ಬರಲಿದ್ದು, 2012ರ ಏಪ್ರಿಲ್ 1ರಿಂದ ಅನ್ವಯವಾಗಲಿದೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ನೇರ ತೆರಿಗೆ ಪಾವತಿ ಮಸೂದೆ ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ತದ ನಂತರ ಹಣಕಾಸು ಸಮಿತಿಗೆ ರವಾನೆಯಾಗಲಿದೆ.ಮುಂದಿನ ಅಧಿವೇಶನದಲ್ಲಿ ಹಣಕಾಸು ಸಮಿತಿಯ ವರದಿಯನ್ನು ಚರ್ಚಿಸಲಾಗುವುದು ಎಂದು ಸಚಿವ ಮುಖರ್ಜಿ ಹೇಳಿದ್ದಾರೆ.
ತೆರಿಗೆ ವಿನಾಯಿತಿ ಮಿತಿಯನ್ನು 1.6 ಲಕ್ಷ ರೂಪಾಯಿಗಳಿಂದ 2 ಲಕ್ಷ ರೂಪಾಯಿಗಳಿಗೆ ಏರಿಕೆ ಘೋಷಿಸಲಾಗಿದೆ. ಹಿರಿಯ ನಾಗರಿಕರಿಗೆ ತೆರಿಗೆ ವಿನಾಯಿತಿಯನ್ನು 2.5 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಸಚಿವ ಪ್ರಣಬ್ ಮಖರ್ಜಿ ತಿಳಿಸಿದ್ದಾರೆ.