ಸತತ ಎರಡು ವಾರಗಳ ಕುಸಿತ ಕಂಡ ವಿದೇಶಿ ಮೀಸಲು ಸಂಗ್ರಹ,ಕಳೆದ ವಾರಂತ್ಯಕ್ಕೆ 282.84 ಮಿಲಿಯನ್ ಡಾಲರ್‌ಗಳಿಂದ 293 ಮಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.
ದೇಶದ ವಿದೇಶಿ ಮೀಸಲು ಸಂಗ್ರಹ ಅಗಸ್ಟ್ 27ಕ್ಕೆ ವಾರಂತ್ಯಗೊಂಡಂತೆ 256.65 ಡಾಲರ್‌ಗಳಿಂದ 279 ಮಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಾರದ ವರದಿಯಲ್ಲಿ ಬಹಿರಂಗಪಡಿಸಿದೆ.
ಡಾಲರ್ ಹೊರತುಪಡಿಸಿ ಇತರ ಕರೆನ್ಸಿಗಳಾದ ಯುರೋ, ಸ್ಟೆರ್ಲಿಂಗ್ ಮತ್ತು ಯೆನ್ ಕರೆನ್ಸಿಗಳ ಏರಿಳಿಕೆಗಳನ್ನು ಡಾಲರ್‌ನಲ್ಲಿ ಪ್ರಕಟಿಸಲಾಗುತ್ತದೆ ಎಂದು ಅಪೆಕ್ಸ್ ಬ್ಯಾಂಕ್ ಮೂಲಗಳು ತಿಳಿಸಿವೆ.
ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಲ್ಲಿ(ಐಎಂಎಫ್) ಭಾರತದ ವಿದೇಶಿ ಮೀಸಲು ಸಂಗ್ರಹದಲ್ಲಿ 4 ಮಿಲಿಯನ್ ಡಾಲರ್‌ಗಳ ಏರಿಕೆಯಾಗಿ, 1,935 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.