ಕೇಂದ್ರ ಸರಕಾರ ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನ ಶೇ.10ರಷ್ಟು ಹಾಗೂ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್‌ನ ಶೇ.5ರಷ್ಟು ಶೇರುಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ ಎಂದು ಇಂಧನ ಸಚಿವಾಲಯದ ಕಾರ್ಯದರ್ಶಿ ಎಸ್.ಸುಂದರೇಶನ್ ಹೇಳಿದ್ದಾರೆ.
ಇಂಧನ ಸಚಿವಾಲಯ, ತೈಲ ಕಂಪೆನಿಗಳ ಶೇರುಗಳ ಮಾರಾಟ ಕುರಿತಂತೆ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದು, ವರದಿಯನ್ನು ಕೇಂದ್ರದ ಸಚಿವ ಸಂಪುಟಕ್ಕೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.
ನೂತನ ಶೇರುಗಳನ್ನು ಬಿಡುಗಡೆ ಮಾಡುವ ಮೂಲಕ ಇಂಡಿಯನ್ ಆಯಿಲ್ ಕಾರ್ಪೋರೇಶನ್‌ನ ಶೇ.10ರಷ್ಟು ಶೇರುಗಳನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದರು.
ಉಭಯ ಕಂಪೆನಿಗಳ ಶೇರ ಮಾರಾಟವನ್ನು ಮುಂಬರುವ ಜನೆವರಿ-ಮಾರ್ಚ್ 2011ರೊಳಗೆ ಮುಕ್ತಾಯಗೊಳಿಸಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವಾಲಯದ ಕಾರ್ಯದರ್ಶಿ ಎಸ್.ಸುಂದರೇಶನ್ ತಿಳಿಸಿದ್ದಾರೆ.