ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ದಳ್ಳಾಳಿ ಹಣವನ್ನು ಹೆಚ್ಚಿಸದಿದ್ದಲ್ಲಿ, ಸೆಪ್ಟೆಂಬರ್ 20ರಿಂದ ದೇಶಾದ್ಯಂತ ಅನಿರ್ಧಿಷ್ಠಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ಪೆಟ್ರೋಲ್ ಪಂಪ್ ಡೀಲರ್‌ಗಳು ಬೆದರಿಕೆಯೊಡ್ಡಿದ್ದಾರೆ.
ದೇಶದಲ್ಲಿರುವ 38,700 ಪೆಟ್ರೋಲ್ ಪಂಪ್‌ಗಳನ್ನು ಪ್ರತಿನಿಧಿಸುವ ಫೆಡರೇಶನ್ ಆಫ್ ಆಲ್ ಇಂಡಿಯಾ ಪೆಟ್ರೋಲೀಯಂ ಟ್ರೇಡರ್ಸ್ (ಎಫ್‌ಎಐಪಿಟಿ)ಸಂಘದ ಪದಾಧಿಕಾರಿಗಳು ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕಮಿಶನ್ ಹಣವನ್ನು ಹೆಚ್ಚಿಸುವಂತೆ ಸರಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಲಿಲ್ಲ. ಆದ್ದರಿಂದ ಸರಕಾರಕ್ಕೆ ಅಂತಿಮ ಗಡುವು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಸ್ತುತವಿರುವ ಕಮಿಶನ್ ದರಕ್ಕಿಂತ ಶೇ.5ರಷ್ಟನ್ನು ಹೆಚ್ಚಿಸುವಂತೆ ಸರಕಾರಕ್ಕೆ ಒತ್ತಾಯಿಸಲಾಗಿದೆ ಎಂದು ಎಫ್‌ಎಐಪಿಟಿ ಸಂಘಟನೆಗಳು ಆರೋಪಿಸಿವೆ.
ನಮ್ಮ ಬೇಡಿಕೆಗಳನ್ನು ಸರಕಾರ ಕೂಡಲೇ ಚರ್ಚಿಸಿ ಈಡೇರಿಸದಿದ್ದಲ್ಲಿ, ಸೆಪ್ಟೆಂಬರ್ 20ರಿಂದ ದೇಶದ 37,800 ಪೆಟ್ರೋಲ್ ಪಂಪ್‌ಗಳನ್ನು ಬಂದ್ ಮಾಡದೇ ಬೇರೆ ಆಯ್ಕೆಗಳಿಲ್ಲ ಎಂದು ಅಸೋಸಿಯೇಶನ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.