ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಬಿಪಿಎಲ್‌ಆರ್ ದರ ಹೆಚ್ಚಳ (HDFC Bank | BPLR | Liquidity | Condition | Tax payments)
Bookmark and Share Feedback Print
 
ದೇಶದ ಖಾಸಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್, ಬೆಂಚ್‌ಮಾರ್ಕ್ ಪ್ರೈಮ್ ಲೆಂಡಿಂಗ್ ದರದಲ್ಲಿ(ಬಿಪಿಎಲ್‌ಆರ್) ಶೇ.0.50ರಷ್ಟು ಹೆಚ್ಚಳಗೊಳಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಕಂಪೆನಿಯ ಆರ್ಥಿಕ ವೆಚ್ಚದಲ್ಲಿ ಏರಿಕೆಯಾಗುತ್ತಿರುವುದರಿಂದ, ಬಿಪಿಎಲ್‌ಆರ್ ದರಗಳಲ್ಲಿ ಹೆಚ್ಚಳಗೊಳಿಸುವ ಸೂಕ್ತ ಸಮಯವಾಗಿದೆ ಎಂದು ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತಿಚೆಗೆ, ಹಲವಾರು ಬ್ಯಾಂಕ್‌ಗಳು ಬಿಪಿಎಲ್‌ಆರ್ ದರಗಳನ್ನು ಹೆಚ್ಚಿಸಿದ್ದರಿಂದ, ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡಾ ಬಿಪಿಎಲ್‌ಆರ್ ದರಗಳಲ್ಲಿ ಏರಿಕೆ ಘೋಷಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಬ್ಯಾಂಕ್‌ನ ನಗದು ಹರಿವನ ವ್ಯವಸ್ಥೆ ಉತ್ತಮವಾಗಿದ್ದು, ಕಾರ್ಪೋರೇಟ್ ಕಂಪೆನಿಗಳು ಸೆಪ್ಟೆಂಬರ್ ಮಧ್ಯ ಭಾಗದಲ್ಲಿ ಮುಂಗಡ ತೆರಿಗೆಯನ್ನು ಪಾವತಿಸುವ ಸಮಯವಾಗಿದ್ದರಿಂದ,ನಗದು ಹರಿವಿನ ಸ್ಥಿತಿಯಲ್ಲಿ ಬಿಗಿಯಾದ ವಾತಾವರಣ ಎದುರಾಗುವ ಸಾಧ್ಯತೆಗಳಿವೆ ಎಂದು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ