ಕೈಗಾರಿಕೋದ್ಯಮ ಕ್ಷೇತ್ರಗಳಿಂದ ಬೇಡಿಕೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ, ಚಿನಿವಾರಪೇಟೆಯಲ್ಲಿ ಬೆಳ್ಳಿಯ ದರ ದಾಖಲೆಯ ಏರಿಕೆ ಕಂಡಿದೆ. ಚಿನ್ನದ ದರದಲ್ಲಿ ಅಲ್ಪ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬೆಳ್ಳಿಯ ದರ ಪ್ರತಿ ಕೆಜಿಗೆ110 ರೂಪಾಯಿಗಳ ಏರಿಕೆ ಕಂಡು 31,800 ರೂಪಾಯಿಗಳ ದಾಖಲೆಯ ಏರಿಕೆ ಕಂಡಿದೆ.ಕಳೆದ ವಾರದ ವಹಿವಾಟಿನ ಮುಕ್ತಾಯಕ್ಕೆ ಬೆಳ್ಳಿಯ ದರ ಪ್ರತಿ ಕೆಜಿಗೆ 31,690 ರೂಪಾಯಿಗಳಿಗೆ ತಲುಪಿತ್ತು.
ಚಿನ್ನದ ದರ ಪ್ರತಿ 10ಗ್ರಾಂಗೆ 5 ರೂಪಾಯಿಗಳ ಹೆಚ್ಚಳವಾಗಿ 18,975 ರೂಪಾಯಿಗಳಿಗೆ ತಲುಪಿದೆ. ಕಳೆದ ವಾರದ ವಹಿವಾಟಿನ ಮುಕ್ತಾಯಕ್ಕೆ 18,970 ರೂಪಾಯಿಗಳಿಗೆ ತಲುಪಿತ್ತು ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ.
ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ದರ ಪ್ರತಿ ಔನ್ಸ್‌ಗೆ 1,249.60 ಡಾಲರ್‌ಗಳಿಗೆ ತಲುಪಿದೆ. ಕಳೆದ ವಾರದ ವಹಿವಾಟಿನ ಮುಕ್ತಾಯಕ್ಕೆ 1,248.04 ಡಾಲರ್‌ಗಳಿಗೆ ತಲುಪಿತ್ತು.
ಶೇರುಪೇಟೆಗಳಲ್ಲಿ ಆರ್ಥಿಕತೆ ಚೇತರಿಕೆಯಾಗಲಿದೆ ಎನ್ನುವ ವರದಿಗಳ ಹಿನ್ನೆಲೆಯಲ್ಲಿ, ಯುರೋಪ್ ರಾಷ್ಟ್ರಗಳಲ್ಲಿ ಚಿನ್ನದ ದರದಲ್ಲಿ ಏರಿಕೆಯಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.