ದರ ಏರಿಕೆ ಹಾಗೂ ಹೂಡಿಕೆ ಹಿಂತೆಗೆತ ಕುರಿತಂತೆ ಕೇಂದ್ರ ಸರಕಾರದ ನಿರ್ಧಾರಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಒಂದು ದಿನದ ಮುಷ್ಕರದಿಂದಾಗಿ, ಬ್ಯಾಂಕಿಂಗ್ ವಹಿವಾಟುಗಳು ಭಾಗಾಂಶ ಅಸ್ತವ್ಯಸ್ತವಾಗಿದೆ ಎಂದು ಮೂಲಗಳು ತಿಳಿಸಿವೆ.
ಆಲ್ ಇಂಡಿಯಾ ಬ್ಯಾಂಕ್ಸ್ ಎಂಪ್ಲಾಯಿಸ್ ಅಸೋಸಿಯೇಶನ್(ಎಐಬಿಇಎ) ಸುಮಾರು 5 ಲಕ್ಷ ಉದ್ಯೋಗಿಗಳು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸಿ.ಎಚ್.ವೆಂಕಟಾಚಲಂ ತಿಳಿಸಿದ್ದಾರೆ.
ಮುಷ್ಕರದಲ್ಲಿ ಸಿಐಟಿಯು ಸೇರಿದಂತೆ ಎಂಟು ಸಂಘಟನೆಗಳು ಭಾಗವಹಿಸಿದ್ದು, ದರ ಏರಿಕೆ ಹಾಗೂ ಹೂಡಿಕೆ ಹಿಂತೆಗೆತ ಹಾಗೂ ಕಾರ್ಮಿಕ ಕಾನೂನು ಉಲ್ಲಂಘನೆಯಂತಹ ಸಮಸ್ಯೆಗಳ ವಿರುದ್ಧ ಸರಕಾರ ಕೂಡಲೇ ಮಧ್ಯಸ್ಥಿಕೆ ವಹಿಸಬೇಕು ಎಂದು ಕರೆ ನೀಡಿವೆ.
ಏತನ್ಮದ್ಯೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮುಷ್ಕರದಲ್ಲಿ ಭಾಗಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ.