ಮ್ಯಾನ್ ಇಂಡಸ್ಟ್ರೀಸ್‌ಗೆ 1,200 ಕೋಚಿ ರೂಪಾಯಿಗಳ ಗುತ್ತಿಗೆ
ನವದೆಹಲಿ, ಬುಧವಾರ, 8 ಸೆಪ್ಟೆಂಬರ್ 2010( 15:12 IST )
ದಾಬೋಲ್-ಬೆಂಗಳೂರು ಪೈಪ್‌ಲೈನ್ ಯೋಜನೆಗಾಗಿ ಗೇಲ್ ಸೇರಿದಂತೆ ದೇಶಿಯ ಮತ್ತು ಅಂತಾರಾಷ್ಟ್ರೀಯ ಕಂಪೆನಿಗಳಿಂದ, ಪೈಪ್ ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿರುವ ಮ್ಯಾನ್ ಇಂಡಸ್ಟ್ರೀಸ್ 1,200 ಕೋಟಿ ರೂಪಾಯಿ ಗುತ್ತಿಗೆಯನ್ನು ಪಡೆದಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಗೇಲ್ ಕಂಪೆನಿಯಿಂದ 125 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದ್ದು, ಏಷ್ಯಾ ಹಾಗೂ ಆಫ್ರಿಕಾ ರಾಷ್ಟ್ರಗಳ ಕಂಪೆನಿಗಳಿಂದ 1,075 ಕೋಟಿ ರೂಪಾಯಿಗಳ ಗುತ್ತಿಗೆ ದೊರೆತಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.
12 ತಿಂಗಳುಗಳ ಅವಧಿಯಲ್ಲಿ ಎರಡು ಲಕ್ಷ ಟನ್ ಬೃಹತ್ ವೃತ್ತದ ಪೈಪುಗಳ ಸರಬರಾಜಿಗಾಗಿ ಹಲವು ದೇಶಗಳಿಂದ ಬೇಡಿಕೆ ಬಂದಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಇತ್ತೀಚಿನ ಬೇಡಿಕೆಗಳಿಂದಾಗಿ ಕಂಪೆನಿಗೆ ಒಟ್ಟು 2,500 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಂತಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.