ದೇಶದ ಖಾಸಗಿ ವಿಮಾನಯಾನ ಕ್ಷೇತ್ರದಲ್ಲಿ ಕಡಿಮೆ ದರದ ಖ್ಯಾತಿಯನ್ನು ಹೊಂದಿರುವ ಸ್ಪೇಸ್ ಜೆಟ್, ಅಕ್ಟೋಬರ್ 7 ರಿಂದ ಸಾಗರೋತ್ತರ ಸಂಚಾರ ಆರಂಭಿಸಲಿದೆ. ಮೊದಲ ದಿನದಂದು ದೆಹಲಿಯಿಂದ ಕಾಠ್ಮಂಡುವಿಗೆ ವಿಮಾನ ಹಾರಾಟ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಐದು ವರ್ಷಗಳಿಂದ ಶೇರುದಾರರು ನೀಡುತ್ತಿರುವ ಉತ್ತೇಜನ ಹಾಗೂ ಪ್ರೋತ್ಸಾಹದಿಂದಾಗಿ ಆತ್ಮವಿಶ್ವಾಸ ವೃದ್ಧಿಯಾಗಿದ್ದು, ಅಂತಾರಾಷ್ಟ್ರೀಯ ವಿಮಾನ ಸಂಚಾರ ಹಾರಾಟ ಆರಂಭಿಸುವ ಮೂಲಕ ಯಶಸ್ವಿಸ ಮತ್ತೊಂದು ಮೈಲುಗಲ್ಲು ತಲುಪಿದಂತಾಗಿದೆ ಎಂದು ಕಂಪೆನಿಯ ನಿರ್ದೇಶಕ ಹಾಗೂ ಮಧ್ಯಂತರ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಿಶೋರ್ ಗುಪ್ತಾ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಠ್ಮಂಡುವಿನ ಹಾರಾಟದ ನಂತರ ಸ್ಪೇಸ್ ಜೆಟ್ ಮಾಲೀಕರಾದ ಕಲಾನಿಧಿ ಮಾರನ್,ಅಕ್ಟೋಬರ್ 9 ರಂದು ಚೆನ್ನೈ-ಕೊಲಂಬೊ ವಿಮಾನ ಹಾರಾಟಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.ಕಾಠ್ಮಂಡುವಿಗೆ ವಾರದ ಅವಧಿಯಲ್ಲಿ 6 ದಿನಗಳು ಮಾತ್ರ ಸಂಚರಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕೊಲಂಬೊ ಮತ್ತು ಕಾಠ್ಮಂಡು ಮಧ್ಯ ವಿಮಾನ ಸಂಚಾರ ಆರಂಭಿಸಲು ಸಂತಸವಾಗುತ್ತಿದೆ ಎಂದು ಸ್ಪೇಸ್‌ಜೆಟ್‌ನ ಮುಖ್ಯ ವಾಣಿಜ್ಯ ಅಧಿಕಾರಿ ಸಂಯುಕ್ತ ಶ್ರೀಧರನ್ ತಿಳಿಸಿದ್ದಾರೆ.